ಕುಮಟಾ: ತಾಲೂಕಿನ ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಂದು ಲಯನ್ಸ್ ಕ್ಲಬ್ ಕುಮಟಾ ವತಿಯಿಂದ. ” ವನಮಹೋತ್ಸವ ” ಆಚರಿಸಲಾಯಿತು. ವಿವಿಧ ಹಣ್ಣಿನ ಗಿಡಗಳು, ತೆಂಗು,ಮಾವು,ಹಲಸು, ಲಿಂಬೆ,ಕರಿಬೇವು ಮಿಂತಾದ ಉಪಯುಕ್ತ ಗಿಡಗಳನ್ನು ನೆಡಲಾಯಿತು. ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಡಾ.ಗಿರೀಶ್ ಕುಚಿನಾಡ್, ಲಯನ್ಸ್ ಕುಮಟಾ ಅಧ್ಯಕ್ಷೆ ಶ್ರೀಮತಿ ವಿನಯಾ ಹೆಗಡೆ, ಕಾರ್ಯದರ್ಶಿಗಳಾದ ಡಾ. ಎಸ್.ಎಸ್.ಹೆಗಡೆ, ಖಜಾಂಚಿಗಳಾದ ಶ್ರೀ ಎಮ್.ಎನ್.ಹೆಗಡೆ, ಸದಸ್ಯರಾದ ಡಾ.ನಾಗರಾಜ ಭಟ್ಟ, ಶ್ರೀ ಎಮ್.ಎಮ್ .ಹೆಗಡೆ, ಶ್ರೀಮತಿ ಮಂಗಲಾ ನಾಯಕ್, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀ ವಾಸುದೇವ ಎಮ್.ನಾಯ್ಕ. ಮುಖ್ಯಾಧ್ಯಾಪಕರಾದ ಡಾ.ರವೀಂದ್ರ ಭಟ್ಟ ಸೂರಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES  ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಉದ್ಯೋಗ ಖಾತ್ರಿ ಯೋಜನೆಯ ತಳಪಾಯವಿದಂತೆ –ಉಮೇಶ ಮುಂಡಳ್ಳಿ

ಲಯನ್ಸ್ ಅಧ್ಯಕ್ಷೆ ಶ್ರೀಮತಿ ವಿನಯಾ ಹೆಗಡೆ ಪ್ರಾಸ್ತಾವಿಕ ಮಾತಿನೊಂದಿಗೆ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ಹಾಗೂ ಲಯನ್ಸ್ ಕ್ಲಬ್ ನ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು. ಶಿಕ್ಷಕರಾದ ವೀಣಾ ನಾಯ್ಕ, ಮಂಗಲಾ ನಾಯ್ಕ, ಶ್ಯಾಮಲಾ ಎಮ್ ಪಟಗಾರ, ಶ್ಯಾಮಲಾ ಬಿ ಪಟಗಾರ, ದೀಪಾ ನಾಯ್ಕ ಸಹಕರಿಸಿದರು. ಸ್ಥಳೀಯರು ಉಪಸ್ಥಿತರಿದ್ದರು.

RELATED ARTICLES  ಗಾಂಜಾ ಸಹಿತ ಆರೋಪಿ ವಶಕ್ಕೆ: ಕೆಜಿಗೂ ಅಧಿಕ ಪ್ರಮಾಣದ ಗಾಂಜಾ ವಶ