ಕುಮಟಾ : ಕೊರೋನಾ ಆತಂಕ ತಾಲೂಕಿನ ಜನರಲ್ಲಿ ಹೆಚ್ಚುತ್ತಲೇ ಇದೆ. ಇಂದಿನ ವರದಿ ಕೂಡಾ ಅದನ್ನು ಹೆಚ್ಚಿಸಿದೆ. ಕುಮಟಾ ತಾಲೂಕಿನಲ್ಲಿ ಇಂದು ಬರೋಬ್ಬರಿ 30 ಪ್ರಕರಣ ದೃಢಪಟ್ಟಿದೆ.
ಖಾಸಗಿ ಹೊಟೇಲ್ ನಲ್ಲಿ ಕೆಲಸಕ್ಕೆ ಇದ್ದಸುಮಾರು 15ಕ್ಕಿಂತ ಹೆಚ್ಚಿನ ಜನರಿಗೆ ಸೋಂಕು ತಗುಲಿದೆ.ಓರ್ವನ ಪ್ರಾಥಮಿಕ ಸಂಪರ್ಕದಿoದಲೇ ಸುಮಾರು 15ಕ್ಕಿಂತ ಹೆಚ್ಚಿನ ಜನರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.
ಆರ್ಮಿಯಿಂದ ವಾಪಸ್ಸಾದ ವ್ಯಕ್ತಿ ಹಾಗೂ ಹಳಕಾರ್, ವಕ್ಕನಳ್ಳಿ, ಗೋಕರ್ಣ, ಧಾರೇಶ್ವರ, ಹೆಗಡೆ, ಚಿತ್ರಗಿ, ಮಣಕಿ, ಹಂದಿಗೋಣ, ಮೂರೂರು ಕ್ರಾಸ್ ಸಮೀಪ ಸೇರಿದಂತೆ ಹಲವೆಡೆ ಸೋಂಕು ದೃಢಪಟ್ಟಿದೆ.
ಇನ್ನುಳಿದಂತೆ ಉತ್ತರ ಕನ್ನಡದ ವಿವಿಧ ತಾಲೂಕಿನ ಸೋಂಕಿತರ ಪಟ್ಟಿ ಇಲ್ಲಿದೆ.
ಭಟ್ಕಳ- 3
ಶಿರಸಿ- 23
ಜೊಯಿಡಾ- 2
ಹಳಿಯಾಳ-14
ಹೊನ್ನಾವರ- 4
ಮುಂಡಗೋಡು- 7
ಅಂಕೋಲ- 1
ಸಿದ್ದಾಪುರ- 4