ಹೊನ್ನಾವರ : ತಾಲೂಕಿನ ಮಂಕಿ ಬಳಿ ರಾತ್ರಿ ವೇಳೆ ವಾಹನ ತಡೆದು ದರೋಡೆ ಮಾಡಲು ಸ್ಕೆಚ್ ಹಾಕಿ ನಿಂತಿದ್ದರು ಎನ್ನಲಾದ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ತಡೆದು ದರೋಡೆ ನಡೆಸಲು ಸ್ಕೆಚ್ ಹಾಕುತ್ತಿದ್ದ
ಬಂದಿತರು ಅಬ್ದುಲ್ ಸಲಾಂ ಬ್ಯಾರಿ, ಅಬ್ದುಲ್ ರಶೀದ್, ಹಬಿಬವುಲ್ಲಾ, ತನ್ವೀರ್ ಎಂಬುವವರನ್ನು ಬಂಧಿಸಲಾಗಿದೆ.
ಪೋಲೀಸರ ದಾಳಿ ವೇಳೆ ದರೋಡೆಗೆ ಬಳಸಲು ತಂದಿದ್ದ ಚಾಕು, ಕಲ್ಲು, ದೊಣ್ಣೆ, ಖಾರದ ಪುಡಿ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿತರು ಪರಾರಿಯಾಗಿದ್ದು ಪೊಲೀಸರು ಆರೋಪಿತರಿಗೆ ಬಲೆ ಬೀಸಿದ್ದಾರೆ.