ಕಾರವಾರ : ಕೊರೋನಾ ಸೋಂಕು ಎಲ್ಲೆಡೆ ಹಬ್ಬತ್ತಿದ್ದು ಜನತೆಗೆ ಇದೇ ಚಿಂತೆ ಎಂಬಂತಾಗಿದೆ. ಕೊರೋನಾ ಗೆದ್ದು ವಾಪಸ್ ಆಗುವವರ ಸಂಖ್ಯೆ ಹೆಚ್ಚುತ್ತಿದ್ದರೂ ಸಾವಿನ ಸಂಖ್ಯೆಯೂ ಏರುತ್ತಿದೆ.
ಕಾರವಾರ ಮೂಲದ 65 ವರ್ಷದ ವೃದ್ಧೆ ಹಾಗೂ ಹೊನ್ನಾವರ ಮೂಲದ 78 ವರ್ಷದ ವೃದ್ಧ ಸೋಂಕಿನಿಂದ ಬಲಿಯಾಗುವ ಮೂಲಕ ಜನತೆಗೆ ಆಘಾತ ನೀಡಿದೆ.
ಕಾರವಾರ ಮೆಡಿಕಲ್ ಕಾಲೇಜಿನ ಕೋವಿಡ್ 19 ವಾರ್ಡಿನಲ್ಲಿ ಕೊರೋನಾ ಸೋಂಕಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 19ಕ್ಕೆ ಏರಿದಂತಾಗಿದೆ.