ಕುಮಟಾ : ತಾಲೂಕಿನ ಹೊಲನಗದ್ದೆ ಹವ್ಯಕ ಸಭಾಭವನದ ಅವರದಲ್ಲಿ ಕಾಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ 32 ಆಶಾ ಕಾರ್ಯಕರ್ತೆಯರ ಅಭಿನಂದನಾ ಕಾರ್ಯಕ್ರಮ ಜರುಗಿತು.
ಲೈನ್ಸ್ ಕ್ಲಬ್ ಕುಮಟಾ ಆಶ್ರಯದಲ್ಲಿ ನಡೆದ ಸರಳ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೈನ್ಸ್ ಅಧ್ಯಕ್ಷೆ ಲೈನ್ ವಿನಯಾ ಹೆಗಡೆ ಯವರು ಕಿಟ್ ಮತ್ತು ಮಾ ಸ್ಕ್ ವಿತರಿಸಿ ಆಶಾ ಕಾರ್ಯಕರ್ತರ ಸ್ವಾರ್ಥ್ ರಹಿತ ಸಮಾಜ ಸೇವೆಯನ್ನು ಶ್ಲಾಘಿಸಿದರು. ಇವತ್ತು ಜನರು ಕೊರೊನ ಮಹಮರಿಯಿಂದಾಗಿ ಭಯ ಭೀತರಾಗಿ ಮನೆಯಲ್ಲಿ ಸುರಕ್ಷಿತವಾಗಿ ಇದ್ದರೂ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಸೇನಾನಿಗಳಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.ಅದಕ್ಕಾಗಿ ಸಂಜೆ ಅವರ ಸೇವೆಯನ್ನು ಗಿರುತಿಸಬೇಕಾಗಿದೆ ಎಂದರು.ಅತ್ಯಂತ ಕಡಿಮೆ ಸಂಬಳ,ಉದ್ಯೋಗ ಭದ್ರತೆ ಇಲ್ಲದಿದ್ದರೂ ತಮ್ಮ ಕರ್ತವ್ಯ ಮರೆತಿಲ್ಲ.ಸರ್ಕಾರ ಅವರ ಬೇಡಿಕೆ ಶೀಘ್ರದಲ್ಲೇ ಈಡೇರಿಸಲಿ.ದೇವರು ಅವ್ರಿಗೆ ಮತ್ತು ಅವರ ಕುಟುಂಬಕ್ಕೆ ಒಳ್ಳೆಯ ಆರೋಗ್ಯ ನೆಮ್ಮದಿ ನೀಡಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಲೈನ್ಸ್ ಕ್ಲಬ್ನ ಸಮಾಜ ಮುಖಿ ಕಾರ್ಯಗಳ ಪರಿಚಯ ನೀಡಿದರು.
ಲೈನ್. ಎಂ.ಎಂ.ಹೆಗಡೆ ಸ್ವಾಗತಿಸಿದರು. ಲೈನ್.ಡಾಕ್ಟರ್.ನಾಗರಾಜ್ ಭಟ್ ವಂದಿಸಿದರು.ಲೈನ್. ಎಂ.ನ್.ಹೆಗಡೆ ಅಭಿನಂದನ ಭಾಷಣ ಮಾಡಿದರು.ಲೈನ್ ಕಾರ್ಯದರ್ಶಿ.ಡಾ. ಎಸ್.ಎಸ್.ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.