ಕುಮಟಾ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಕುಮಟಾ ಇವರ ವತಿಯಿಂದ ಪ್ರತೀ ವರ್ಷ ನಡೆಸುವ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ದಿನಾಂಕ 29/07/2020 ಬುಧವಾರ ಬೆಳಿಗ್ಗೆ 11 ಗಂಟೆಗೆ ಕುಮಟಾದ ವಿದ್ಯಾಗಿರಿಯ ಲಯನ್ಸ್ ರೇವಣಕರ ಚಾರಿಟೇಬಲ್ ಟ್ರಸ್ಟ್ ನ ಕಣ್ಣಿನ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
“ನೇತ್ರದಾನ ಜಾಗೃತಿ”ಯ ಸಂದೇಶದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಸಂಘಟನೆಯ ಕುಮಟಾ ತಾಲೂಕಾ ಅಧ್ಯಕ್ಷರಾದ ಸುಬ್ರಾಯ ಜಿ. ಭಟ್ಟ ಅಧ್ಯಕ್ಷತೆ ವಹಿಸಲಿದ್ದು , ಲಯನ್ಸ್ ಹ್ಯೂಮನಿಟೇರಿಯನ್ ಸರ್ವೀಸ್ ಟ್ರಸ್ಟ್(ರಿ.) ಕುಮಟಾ ಇದರ ಚೇರ್ ಮನ್ ದೇವಿದಾಸ ಡಿ. ಶೇಟ್ ಅಭ್ಯಾಗತರಾಗಿ ಸಭೆಯಲ್ಲಿ ಇರುವರು.
ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಕಾರಣ ಕಾರ್ಯಕ್ರಮವನ್ನು ಆಡಂಬರದಲ್ಲಿ ನಡೆಸದೆ, ಜನತೆಗೆ ಒಳ್ಳೆಯ ಸಂದೇಶ ಕೊಡುವ ದಿಸೆಯಲ್ಲಿ ಯೋಜಿಸಲಾಗಿದ್ದು ಸರಕಾರಿ ನಿಯಮವನ್ನು ಪಾಲಿಸುವ ಮೂಲಕ ಕಾರ್ಯಕ್ರಮದಲ್ಲಿ ಎಲ್ಲಾ ಪತ್ರಕರ್ತರನ್ನು ಹಾಗೂ ಆಹ್ವಾನಿತ ಪ್ರಮುಖರು ಹಾಜರಿರಲಿದ್ದಾರೆಂದು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ.) ಕುಮಟಾ ಇದರ ಅಧ್ಯಕ್ಷರಾದ ಸುಬ್ರಾಯ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.