ಕುಮಟಾ: ತಾಲೂಕಿನಲ್ಲಿ ಇಂದಿನಿಂದ ಹಾಪ್ ಡೇ ಲೊಕ್ ಡೌನ್ ತೆರವುಗೊಳಿಸಲಾಗಿದೆ. ಈ ಹಿಂದೆ ತಾಲೂಕಿನಲ್ಲಿ ಕೊರೋನಾ ಸೋಂಕು ಅತಿ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಒತ್ತಾಯದಂತೆ ಸ್ವಯಂ ಪ್ರೇರಿತ ಹಾಪ್ ಡೇ ಲೊಕ್ ಡೌನ್ ಮಾಡಲಾಗಿತ್ತು.
ಕುಮಟಾ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಲೊಕ್ ಡೌನ್ ತೆರೆಯುವಂತೆ ಜನರು ಒತ್ತಾಯಿಸುತ್ತಿದ್ದಾರೆ.ಜನರ ಒತ್ತಾಯದಂತೆ ಹಾಪ್ ಡೇ ಲೊಕ್ ಡೌನ್ ಇಂದಿನಿಂದ ತೆರವುಗೊಳಿಸಲಾಗುವುದು ಎಂದು ಇಂದು ಪಟ್ಟಣಪಂಚಾಯತ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ದಿನಕರ ಶೆಟ್ಟಿಯವರು ಪ್ರಕಟಿಸಿದರು.