ಕಾರವಾರ : ಕಾರವಾರ 4, ಅಂಕೋಲಾದಲ್ಲಿ 14, ಕುಮಟಾ 1, ಯಲ್ಲಾಪುರ 1, ಹೊನ್ನಾವರ 6, ಭಟ್ಕಳದಲ್ಲಿ ಇಬ್ಬರು, ಶಿರಸಿಯಲ್ಲಿ ಐವರಲ್ಲಿ, ಮುಂಡಗೋಡದಲ್ಲಿ 8, ಹಳಿಯಾಳದಲ್ಲಿ 49, ಜೊಯಿಡಾದಲ್ಲಿ ಇಬ್ಬರಲ್ಲಿ ಶುಕ್ರವಾರ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 83 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

RELATED ARTICLES  ಕುಮಟಾ,ಗೋಕರ್ಣ ವೈದ್ಯರ ವರದಿ ನೆಗೆಟೀವ್ : ನಿಟ್ಟುಸಿರು ಬಿಟ್ಟ ಕಂಗಾಲಾಗಿದ್ದ ಜನತೆ..!

ಇಂದು ಉತ್ತರ ಕನ್ನಡದಲ್ಲಿ 92 ಜನರಲ್ಲಿ ಕೊರೋನಾ ಪಾಸಿಟೀವ್ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ 745 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.
ಈವರೆಗೆ ಜಿಲ್ಲೆಯ 2,119 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,351 ಮಂದಿ ಗುಣಮುಖರಾಗಿದ್ದಾರೆ. 23 ಮಂದಿ ಸಾವನ್ನಪ್ಪಿದ್ದಾರೆ.

RELATED ARTICLES  ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು : ಓರ್ವ ಗಂಭೀರ: ಭಟ್ಕಳದಲ್ಲಿ ದುರ್ಘಟನೆ

ಕಾರವಾರದಲ್ಲಿ ಐವರು, ಅಂಕೋಲಾ, ಕುಮಟಾದಲ್ಲಿ ತಲಾ ಎಂಟು, ಹೊನ್ನಾವರದಲ್ಲಿ ಓರ್ವ, ಭಟ್ಕಳದಲ್ಲಿ 13, ಶಿರಸಿಯಲ್ಲಿ 14, ಮುಂಡಗೋಡದಲ್ಲಿ ಇಬ್ಬರು, ಹಳಿಯಾಳದಲ್ಲಿ 33 ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.