ಭಟ್ಕಳ : ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ತನ್ನದೇ ಸಾಧನೆಯ ಮೂಲಕ ಗುರುತಿಸಿಕೊಂಡ ವಿನೂತನ ಶಿಕ್ಷಣ ಸಂಸ್ಥೆ ಅಂಜುಮನ್ ಹಾಮಿ-ಇ- ಮುಸ್ಲಿಮೀನ್ ಶಿಕ್ಷಣ ಸಂಸ್ಥೆ. ಎಲ್ಲರ ಒಳಿತಿಗೆ ಜೊತೆಗೆ ಅನೇಕರ ಬದುಕಿಗೆ ಪ್ರೇರಣೆ ನೀಡಿದ ಈ ಸಂಸ್ಥೆ ಹುಟ್ಟಿದ್ದು 1919 ಆ 2 ರಂದು. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ
ಶತಮಾನೋತ್ಸವವನ್ನು ಕಂಡ ಕೆಲವೇ
ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಅಂಜುಮನ್ ಶಿಕ್ಷಣ ಸಂಸ್ಥೆಯೂ ಒಂದಾಗಿದೆ.
ಸಮುದಾಯದ ಸರ್ವಾಂಗೀಣ ಅಭಿವೃದ್ದಿಗಾಗಿ ಹೋರಾಡಲು ವಿಶಾಲ ತಳಹದಿಯ ದೊಡ್ಡ ಸಂಖ್ಯೆಯೊಂದರ ತುರ್ತು ಅಗತ್ಯ ತಲೆದೊರಿದ ಫಲವಾಗಿ 1919, ಆ.2ರಂದು ಅಂಜುಮನ್ ಹಾಮಿ–ಮುಸ್ಲಿಮೀನ್ ಸಂಸ್ಥೆ 1919, ಸೆ1ರಂದು ತನ್ನ ಮೊಟ್ಟ ಮೊದಲ ಶಾಲೆಯನ್ನು ಕೇವಲ ಹನ್ನೊಂದು ವಿದ್ಯಾರ್ಥಿಗಳಿಂದ ಆರಂಭಿಸಿತು. 1929ರಲ್ಲಿ ಪ್ರಾಥಮಿಕ ದರ್ಜೆಗಳನ್ನೂ ಪ್ರಾರಂಭಿಸಿ, ಈ ಶಾಲೆ ಸರ್ಕಾರದ ಮಾನ್ಯತೆ
ಪಡೆಯಲು ಶಕ್ತವಾಯಿತು.
ಅಂದಿನಿಂದ ಸತತ ಉನ್ನತಿಗೇರಿ, 1939ರ ಜೂನ್‌ನಲ್ಲಿ ಪ್ರೌಢಶಾಲೆಯ ದರ್ಜೆಗೇರಿತು. ಹೀಗೆ ಭಟ್ಕಳದಲ್ಲಿ ಇಸ್ಲಾಮಿಯಾ ಆಂಗೊ ಉರ್ದು ಹೈಸ್ಕೂಲ್’ ಬೆಳಕುಕಂಡಿತು ಆ ಶಾಲೆಯ ಮೊದಲತಂಡದಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಎಂಟು, ಆದರೂ ಸಂಸ್ಥೆಯ ದಿನೇ ದಿನೇ ಉನ್ನತಿಪಡೆಯಿತು.
ನಂತರದಲ್ಲಿ ಈ ಸಂಸ್ಥೆ ಹಿಂತಿರುಗಿ ನೋಡಲೇ ಇಲ್ಲ. ಪ್ರಸ್ತುತ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು
ವ್ಯಾಸಂಗ ಮಾಡುತ್ತಿದ್ದಾರೆ, ಸಾಕಷ್ಟು ಶಿಕ್್ಷಕ
ಶಿಕ್ಷಕೇತರ ಸಿಬ್ಬಂದಿಗಳೂ ಇದ್ದಾರೆ.
1966ರ ಶಾಲಾ ವರ್ಷದಲ್ಲಿ ಇಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನೂ ತೆರೆಯಲಾಯಿತು, 1968ರಲ್ಲಿ ಅಂಜುಮನ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು
ಸ್ಥಾಪಿಸಲ್ಪಟ್ಟಿತು. ಪ್ರಾರಂಭದಲ್ಲಿ ವಿಜ್ಞಾನೇತರ
ವಿಷಯಗಳನ್ನಷ್ಟೇ ಕಲಿಸಲಾಯಿತಾದರೂ
ಒಂದೇ ವರ್ಷದಲ್ಲಿ ವಿಜ್ಞಾನ ವ್ಯಾಸಂಗಕ್ಕೂ ಅವಕಾಶ ಮಾಡಿಕೊಡಲಾಯಿತು. ಮೊದಲ ವರ್ಷಗಳಲ್ಲಿ ಹೈಸ್ಕೂಲ್ ಕಟ್ಟಡದಲ್ಲಿ ನಡೆಯುತ್ತಿದ್ದ ಈ ಸಂಸ್ಥೆಯನ್ನು ಬಳಿಕ ಗುಡ್ಡದ ತುದಿಯಲ್ಲಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.
1971ರಲ್ಲಿ ಮಹಿಳೆಯರ ವಿದ್ಯಾಭ್ಯಾಸದ ಕುರಿತು ಯೋಚನೆ ಮಾಡಿದ ಸಂಸ್ಥೆ “ಅಂಜುಮನ್ ಹೆಣ್ಣುಮಕ್ಕಳ
ಪ್ರೌಢಶಾಲೆ”ಯನ್ನು ತೆರೆಯಿತು. 1979ರಲ್ಲಿ
ಇಲ್ಲಿ ಇಂಗ್ಲಿಷ್ ಮಾಧ್ಯಮ ವಿಭಾಗವನ್ನು
ಆರಂಭಿಸಲಾಯಿತು. 1980ರಲ್ಲಿ ಹೆಣ್ಣು
ಮಕ್ಕಳಿಗಾಗಿ ಅಂಜುಮನ್ ಪದವಿ ಪೂರ್ವ
ಮಹಾವಿದ್ಯಾಲಯ ಜನ್ಮತಾಳಿತು. ಈಗ
ಬಾಲಕಿಯರ ಹೈಸ್ಕೂಲ್, ಪ.ಪೂ. ಕಾಲೇಜು
ಮಹಿಳಾ ಕಾಲೇಜು ಒಂದೇ ಕ್ಯಾಂಪಸ್
ನಲ್ಲಿವೆ. ಮಹಿಳೆಯರು ಶೈಕ್ಷಣಿಕ ಕ್ಷೇತ್ರದಲ್ಲಿ ಸದುಪಯೋಗ ಪಡೆಯಲು ಸಂಸ್ಥೆ ಭದ್ರ ಅವಕಾಶ ಕಲ್ಪಿಸಿತು.
ಬಿಎಂ, ಎಂಜಿನಿಯರಿಂಗ್, ಎಂಬಿಎ ಪದವಿ, ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಖಾಸಗಿ ತಾಂತ್ರಿಕ ಕಾಲೇಜು ಸ್ಥಾಪಿಸಿ ಗಮನ ಸೆಳೆಯಿತು. ಜಿಲ್ಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಅತ್ಯಂತ
ಕಡಿಮೆ ಶುಲ್ಕದೊಂದಿಗೆ ಯಾವುದೇ ಭೇದ ಭಾವವಿಲ್ಲದೇ ಶಿಕ್ಷಣವನ್ನು ನೀಡುತ್ತಿರುವ ಹೆಮ್ಮೆಯ ಸಂಸ್ಥೆ ಇದಾಗಿದೆ.
ಅಂಜುಮಾನ್ ಕಾಲೇಜ್ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಮಟ್ಟದಲ್ಲಿ ಅನೇಕ ರ್ಯಾಂಕ್ ಪಡೆದಿದ್ದು ವಿಶೇಷ
ಸಿವಿಲ್ ವಿಭಾಗದಲ್ಲಿ ನಾಲ್ಕು ಪ್ರಥಮ ಸ್ಥಾನಗಳೊಂದಿಗೆ ಓರ್ವ ನಾಲ್ಕು ಚಿನ್ನದ ಪದಕ ಪಡೆದರೆ ಇನ್ನೊರ್ವ 12 ಚಿನ್ನದ ಪದಕ ಗಳಿಸಿದ್ದಾರೆ. ಇ.ಎನ್.ಸಿಯಲ್ಲಿ ಎರಡು ಪ್ರಥಮ ಸ್ಥಾನ, ಸಿ.ಎಸ್.ಸಿಯಲ್ಲಿ ಪ್ರಥಮ
ಸ್ಥಾನ ಗಳನ್ನು ಗಳಿಸಿದ ಕೀರ್ತಿ ಇಲ್ಲಿನ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ.
1986-87 ಅಶೋಕ ಕುಮಾರ್ ಬೆಳ್ಳೆ, ಇಎನ್‌ಸಿ ಪ್ರಥಮ ಸ್ಥಾನ, 1988-89 ವಿನೋದ ಡಿ ನಾಯ್ಕ ಸಿವಿಲ್ ದ್ವಿತೀಯ ಸ್ಥಾನ, 1990-91 ರಾಹುಲ್ ಸಿಂಗ್ ಇ.ಎನ್.ಸಿ ಪ್ರಥಮ 1994-95 ವಿವೇಕ ಆರ್. ಪ್ರಭು ಸಿವಿಲ್ ದ್ವಿತೀಯಸ್ಥಾನ, 1994-95 ರವಿ ಹೆಗಡೆ ಸಿವಿಲ್
ಮೂರನೇ ಸ್ಥಾನ, 1995-96 ನಶಿಮುದ್ದೀನ್ ಪ್ರಥಮ ಸ್ಥಾನ, 1996-97 ಬಿ ವಿಠಲಕಿರಣ ಇಎನ್‌ಸಿ ಮೂರನೇ ಸ್ಥಾನ, 1997-98 ರೋಹಿತ್ ರಾಘವನ್ ಸಿವಿಲ್ ನಾಲ್ಕನೇ ಸ್ಥಾಾನ, 1997-98 ಗೋವಿಂದ ರಾಜ ಭಟ್ ಐದನೇ ಸ್ಥಾನ, 1997-98 ಸಿದ್ದಿಕ್ ಎ.ಕೆ. ಮೆಕ್ಯಾನಿಕಲ್ ನಾಲ್ಕನೇ ಸ್ಥಾನ ಹೀಗೆ ಮುಂದುವರಿದು , 1998-99 ಸಂತೋಷ ನಾಯ್ಕ ಜಿ.ಎನ್.ಸಿಯಲ್ಲಿ ನಾಲ್ಕನೇ ಸ್ಥಾನ, 1998-99 ಫೆರ್ನಾಂಡೀಸ್ ಇಎನ್‌ಸಿ ನಾಲ್ಕನೇ ಸ್ಥಾನ
1999-2000 ಮೊಹಮದ್ ಆರ್ಫಾನ್ ಸಿವಿಲ್ ಪ್ರಥಮ ಸ್ಥಾನ, 2005-06 ಪ್ರಸನ್ನ ಕುಮಾರ್ (4 ಚಿನ್ನದ ಪದಕದೊಂದಿಗೆ) ಸಿವಿಲ್ ಪ್ರಥಮ ಸ್ಥಾನ, 2008-09 ಗಣೇಶ ಪೂಜಾರಿ ಇಎನ್ಸಿ ನಾಲ್ಕನೇ ಸ್ಥಾನ, 2008-09
ಮೊಹಮ್ಮದ್ ಹುಸೇನ್ ಸಿವಿಲ್ ಎಂಟನೇ ಸ್ಥಾನ 2013-14 ನರಸಿಂಹ ಸೂರ್ಯಕಾಂತ ಪ್ರಭು ಮೆಕ್ಯಾನಿಕಲ್ ಚಿನ್ನದ ಪದಕ, 2014-15 ಅಕ್ಷಯ್ ಕಾಮತ್ ಸಿವಿಲ್
ವಿಷಯವಾರು ಚಿನ್ನದ ಪದಕ, 2018-19
ಮುಷ್ಠಿರಾ ಶಾಬಂದ್ರಿ ಎಂ.ಬಿ.ಎ ಒಂಬತ್ತನೇ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.
ಶತಮಾನದಷ್ಟು ದೀರ್ಘಕಾಲದಿಂದ
ಅಂಜುಮನ್ ಕಾಲೇಜು ಹಗಲಿರುಳೆನ್ನದೆ ಜನ ಸಮುದಾಯದ ಉದ್ದಾರವನ್ನೇ ಗುರಿಯಾಗಿಟ್ಟುಕೊಂಡು
ದುಡಿಯುತ್ತಾ ಬಂದಿದೆ. 1972ರಲ್ಲಿ ನಡೆದ
ಅಂಜುಮನ್ನ ಸುವರ್ಣ ಮಹೋತ್ಸವವು
ವಿಜೃಂಭಣೆಯಿಂದಾಗಿ ಸದಾ ನೆನಪಿಡುವ
ಒಂದು ಘಟನೆಯಾಗಿದೆ. ಕಳೆದ
2018-19ನೇ ಸಾಲಿನಲ್ಲಿ ಶತಮಾನೋತ್ಸವ
ಆಚರಿಸಿಕೊಂಡ ಸಂಸ್ಥೆ ವರ್ಷವಿಡೀ
ಕಾರ್ಯಕ್ರಮ ಹಮ್ಮಿಕೊಂಡಿದ್ದಲ್ಲದೇ
ಅನೇಕ ಶೈಕ್ಷಣಿಕ ಸಮ್ಮೇಳನವನ್ನು ಮಾಡಿ
ಶೈಕ್ಷಣಿಕ ರಂಗದಲ್ಲಿ ಹೊಸದಾದ ದಿಸೆ ಕಂಡುಕೊಂಡಿದೆ.