1980 ನೇ ಇಸವಿಯಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ಕರ್ನಾಟಕದ ಕುಮಟಾಕೆ ಬಂದು ತಿಂಡಿ ತಿನಿಸುಗಳನ್ನು ತಯಾರಿಸಿ ಸೈಕಲ್ ಮೇಲೆ ಹೊತ್ತೊಯ್ದು ಅಂಗಡಿಗಳಿಗೆ ಮಾರಾಟಮಾಡಿ ಅದರಿಂದ ಬಂದ ಹಣದಿಂದ ಬಡತನದ ಜೀವನ ಮಾಡಿಕೊಂಡಿದ್ದ ಪೊನ್ನಪಾಂಡೆ ಹಾಗೂ ಶಾಂತಿ ದಂಪತಿಗಳಿಗೆ ತಮ್ಮ ಒಬ್ಬನೇ ಮಗನಿಗೆ ಉನ್ನತ ಶಿಕ್ಷಣ ಕೊಡಿಸುವ ಮಹದಾಸೆಯಿತ್ತು .ಮಗ ಗಣೇಶ ಕೂಡ ಚೆನ್ನಾಗಿ ಓದಿ ಉತ್ತಮ ಉದ್ಯೋಗ ಸಂಪಾದನೆ ಮಾಡಿ ತಮ್ಮ ಕಷ್ಟಗಳನ್ನು ಕಳೆಯುತ್ತಾನೆ ಎಂಬ ಭರವಸೆಯಲ್ಲಿ ಮಗನನ್ನು ಬಿ ಜಿ ಎಸ್ ಕೇಂದ್ರೀಯ ವಿದ್ಯಾಲಯಕ್ಕೆ ಕಳುಹಿಸಿದ್ದರು .ಮಗ ಗಣೇಶನೂ ಕೂಡ ತಂದೆ ತಾಯಿಯರ ಬಯಕೆಯಂತೆ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಯ್ದುಕೊಂಡಿದ್ದನು.ಹೀಗೆ ಬಡತನದಲ್ಲೂ ಸುಂದರ ಸಂಸಾರ ನಡೆಸುತ್ತಬಂದ ಪೊನ್ನಪಾಂಡೆ ಬದುಕಿನಲ್ಲಿ ಕ್ರೂರವಿಧಿಯು ಅಟ್ಟಹಾಸ ಮೆರೆಯಿತು.2012 ನೇ ಇಸವಿ ಮಾರ್ಚ್ 6 ನೇ ತಾರೀಖು ಪೊನ್ನಪಾಂಡೆ ತನ್ನ ಹುಟ್ಟೂರಾದ ಕೊಯಮತ್ತೂರಿನಿಂದ ರೈಲಿನ ಮೂಲಕ ಕರ್ನಾಟಕದ ಕುಮಟಾಕೆ ಕುಟುಂಬದೊಂದಿಗೆ ಬರುತ್ತಿರುವಾಗ ತಮಿಳುನಾಡು ಮತ್ತು ಕೇರಳದ ಗಡಿಯ ಅರಣ್ಯಪ್ರದೇಶದಲ್ಲಿ ರೈಲಿನ ಬಾಗಿಲಲ್ಲಿ ನಿಂತಿದ್ದ ಮಗ ಗಣೇಶ ಕಾಲು ಜಾರಿ ಕೆಳಗೆಬಿದ್ದ ಕೂಡಲೇ ರೈಲನ್ನು ನಿಲ್ಲಿಸಿ ಗಣೇಶನನ್ನು ಆಸ್ಪತ್ರೆಗೆ ಸೇರಿಸಿದಾಗ ಪೊನ್ನಪಾಂಡೆ ತನ್ನ ಮಗನನ್ನು ಉಳಿಸಿಕೊಳ್ಳಲು ಸಫಲನಾದರೂ ಮಗನ ಎರಡೂ ಕಾಲುಗಳನ್ನು ಕಳೆದುಕೊಳ್ಳಬೇಕಾಯ್ತು.ಈ ಪ್ರಕರಣದಿಂದ ಸಂಪೂರ್ಣವಾಗಿ ಪೊನ್ನಪಾಂಡೆ ದಂಪತಿಗಳು ಕುಸಿದುಹೋದರು.ಮಗ ಗಣೇಶನಿಗೆ ಕೃತಕ ಕಾಲುಗಳನ್ನು ಅಳವಡಿಸಲಾಯಿತು.ಕಾಲು ಕಳೆದುಕೊಂಡರೂ ಗಣೇಶ ಬದುಕಬೇಕೆಂಬ ಛಲ ಕಳೆದು ಕೊಳ್ಳಲಿಲ್ಲ ಶಾಲೆಗೆ ಸೇರಿದ ಕಷ್ಟದಲ್ಲಿದ್ದ ಪೊನ್ನಪಾಂಡೆ ಗೆ ಬಿಜಿಎಸ್ ಸಂಸ್ಥೆ ಹಾಗೂ ಸುತ್ತಲಿನ ದಾನಿಗಳು ನೆರವಾದರು.ಗಣೇಶ ಉತ್ತಮವಾಗಿ ವಿದ್ಯಾಭ್ಯಾಸ ಸಾಗಿಸಿದ.ಮಗನ ಚಿಂತೆಯಲ್ಲಿದ್ದ ಪೊನ್ನಪಾಂಡೆ 2016 ರಲ್ಲಿ ಇಹಲೋಕ ತ್ಯಜಿಸಿದ ಅವರ ಕುಟುಂಬ ಅಕ್ಷರಶಃ ಬೀದಿಗೆ ಬಂತು ಶಾಂತಿ ಪೊನ್ನಪಾಂಡೆ ಕಡುಕಷ್ಟ ಅನುಭವಿಸಬೇಕಾಗಿಬಂತು ಊಟದ ದಿನಸಿಗೂ ಕಷ್ಟವಾಯ್ತು ಸುತ್ತಲಿನ ಕೆಲವು ವಿಶಾಲ ಮನಸ್ಸಿನವರು ಅವರಿಗೆ ನೆರವಾದರು .ಗಣೇಶ ಕಷ್ಟದಲ್ಲೂ ಕಲಿತು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದನು.ಅವರ ತಾಯಿ ಕಡಲೆ ಬಿಟ್ಟು ಕಾಗಾಲದಲ್ಲಿ ಬಂದು ನೆಲಸಿದರು.ಗಣೇಶನಿಗೆ ಪಿ ಯೂ ಸಿ ಯಲ್ಲಿ ವಾಣಿಜ್ಯ ವಿಭಾಗದಲ್ಲಿ ಕಲಿಯುವ ಬಯಕೆ ಆದರೆ ಕಾಲೇಜಿನ ತನಕ ನಡೆದುಕೊಂಡು ಹೋಗುವುದು ಕಷ್ಟಕರ ಇಂಥ ಸಂದರ್ಭದಲ್ಲಿ ಆತನ ಪಾಲಿಗೆ ಆಶಾಕಿರಣವಾದದ್ದು ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಕೊಂಕಣ ಎಜ್ಯಕೇಶನ್ ಟ್ರಸ್ಟ್. ಗಣೇಶನಿಗೆ ಬಿವಕೆ ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ನಿಶುಲ್ಕ ಶಿಕ್ಷಣ ನೀಡಲು ಮುಂದಾಯಿತು.ಸಂಸ್ಥೆಯ ಶಾಲಾ ವಾಹನ ಕಾಲೇಜಿನ ಮುಖ್ಯದ್ವಾರದ ತನಕ ಹೋಗುತ್ತಿದ್ದರಿಂದ ಗಣೇಶನಿಗೆ ನೆರವಾಯಿತು.ಗಣೇಶನಿಗೆ ಅನುಕೂಲವಾಗಲೆಂದೆ ವಾಣಿಜ್ಯ ತರಗತಿಯನ್ನು ನೆಲಮಹಡಿಗೆ ವರ್ಗಾಯಿಸಲಾಯಿತು.ಸಂಸ್ಥೆ ಪ್ರಾಚಾರ್ಯರು ಉಪನ್ಯಾಸಕರು ಕಷ್ಟದ ಸಂದರ್ಭದಲ್ಲಿ ಗಣೇಶನಿಗೆ ತನು ಮನ ಧನ ಸಹಾಯ ಮಾಡಿ ಹುರಿದುಂಬಿಸಿದರು .ಚೆನ್ನಾಗಿ ಅಭ್ಯಾಸ ಮಾಡಿದ ಗಣೇಶ ಪೊನ್ನಪಾಂಡೆ ದ್ವಿತೀಯ ಪಿಯುಸಿಯನ್ನು ಅತ್ಯನ್ನತ ಶ್ರೇಣಿಯಲ್ಲಿ ಪಾಸುಮಾಡಿದ.
ಗಣೇಶನಿಗೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಬಯಕೆ ಇದ್ದರೂ ಮನೆಯಲ್ಲಿ ಕಿತ್ತು ತಿನ್ನುವ ಬಡತನ ತಾಯಿ ಶಾಂತಿ ಪೊನ್ನಪಾಂಡೆ ಎರಡು ಮೂರು ಬಗೆಯ ತಿಂಡಿ ತಯಾರಿಸಿ ಸುತ್ತ ಇರುವ ಮೂರು ಅಂಗಡಿಗೆ ಪೂರೈಸಿ ಬರುವ ಕೆಲವೇ ಹಣದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದಾಳೆ.
ಆತ್ಮೀಯರೇ ಸಾಕಷ್ಟು ಸಂಪತ್ತು ಇದ್ದರೂ ಕಲಿಕೆಯಲ್ಲಿ ಆಸಕ್ತಿ ಇರದೇ ಅವಿಧೇಯರಾಗಿರುವ ಅನೇಕರ ಮಧ್ಯದಲ್ಲಿ ಎರಡೂ ಕಾಲು ಕಳೆದುಕೊಂಡರೂ ಸೌಜನ್ಯ ಕಳೆದುಕೊಳ್ಳದೇ ವಿನೀತ ಭಾವ ಉಳಿಸಿಕೊಂಡು ಬದುಕುವ ಛಲ ಮೆರೆಯುತ್ತಿರುವ ಗಣೇಶ ನಮಗಿಂದು ಮಾದರಿ.ಕಷ್ಟದಲ್ಲಿರುವವರ ಪಾಲಿಗೆ ದೇವರು ಮನ್ಯಷ್ಯರ ರೂಪದಲ್ಲಿಯೇ ಬಂದು ನೆರವನ್ನು ನೀಡುತ್ತಾನೆ ಎಂಬ ಅಚಲವಾದ ನಂಬಿಕೆಯ ನೆಲ ನಮ್ಮದು ಗಣೇಶನ ಉಜ್ವಲಭವಿಷ್ಯಕ್ಕಾಗಿ ಉಳ್ಳವರು ನೆರವಿನ ಹಸ್ತ ಚಾಚಬೇಕಿದೆ ಆತನ ಕನಸನ್ನು ನನಸಾಗಿಸಲು ಆತನಿಗೆ ಧನ ಸಹಾಯದ ಅತೀ ಅವಶ್ಯಕತೆ ಇದೆ ಕಾರಣ ಮಾನವೀಯ ನೆಲೆಯಲ್ಲಿ ಆತನಿಗೆ ನೆರವಾಗಬೇಕೆಂದು ಕೋರುತ್ತೇನೆ.
ನೆರವುನೀಡುವವರು ಈ ಕೆಳಕಂಡ ಬ್ಯಾಂಕ ಖಾತೆಗೆ ಹಣವನ್ನು ವರ್ಗಾಯಿಸಿ ಉಪಕರಿಸಿ
NAME:GANESH PONAPANDI
A/C : 37986740983
BANK : STATE BANK
IFSC: SBIN0000865
MIDR: 581002652
ಸಂಪರ್ಕ ಸಂಖ್ಯೆ : 7026233652
ವರದಿ, ಚಿದಾನಂದ ಭಂಡಾರಿ ಕಾಗಾಲ.