ಕಾರವಾರ : ಕಾರವಾರ- 05, ಕುಮಟಾ-14, ಅಂಕೋಲ-02, ಹೊನ್ನಾವರ-01, ಭಟ್ಕಳ-3, ಶಿರಸಿ-02, ಯಲ್ಲಾಪುರ -02, ಮುಂಡಗೋಡು-05, ಹಳಿಯಾಳ- 13, ಜೋಯಿಡಾ-04 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಇಂದು ಉತ್ತರ ಕನ್ನಡದಲ್ಲಿ 51 ಜನರಲ್ಲಿ ಪಾಸಿಟಿವ್ ವರದಿಯಾಗಿದೆ.
67 ಜನ ಗುಣಮುಖರಾಗಿ ಇಂದು ಬಿಡುಗಡೆಹೊಂದಿದ್ದಾರೆ. 649 ಜನ ವಿವಿಧ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಈ ವರೆಗೆ ಕರೋನಾದಿಂದ ಸಾವು ಕಂಡವರು 24.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 2170 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು 79 ಜನರು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆಪಡೆಯುತಿದ್ದಾರೆ.
ಕಾರವಾರದಲ್ಲಿ 17, ಕುಮಟಾದಲ್ಲಿ 4, ಹೊನ್ನಾವರದಲ್ಲಿ 11, ಭಟ್ಕಳದಲ್ಲಿ 15, ಶಿರಸಿಯಲ್ಲಿ 5, ಯಲ್ಲಾಪುರದಲ್ಲಿ ಇಬ್ಬರು, ಹಳಿಯಾಳದಲ್ಲಿ 13 ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಕಾರವಾರದಲ್ಲಿ ಒಂದು ಸಾವಾಗಿದೆ.