ಕುಮಟಾ : ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ (UPSC)
ಕೇಂದ್ರ ಲೋಕಸೇವಾ ಆಯೋಗದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು.
ಅಂಕೋಲಾ ತಾಲೂಕಿನ ವಾಸರಕುದ್ರಿಗಿಯ ಶಿಕ್ಷಕ ದಂಪತಿ ಶಾಂತಾರಾಮ ನಾಯಕ ಹಾಗು ರಾಜಮ್ಮ ಅವರ ಪುತ್ರಿ ಹೇಮಾ ನಾಯಕ, ಅವರು 225ನೇ ಸ್ಥಾನದೊಂದಿಗೆ ತೇರ್ಗಡೆಯಾಗಿದ್ದಾರೆ.
ಉತ್ತರ ಕನ್ನಡದ ದಾಂಡೇಲಿಯ ಸಚಿನ್ ಹಿರೇಮಠ್ 215 ನೇ ರ್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಕುಮಟಾ ಕತಗಾಲದ ಮೂಲದ ಬೆಂಗಳೂರು ನಿವಾಸಿ ರಿಟೈರ್ಡ್ ಜಾಂಯ್ಟ್ ಡೈರೆಕ್ಟರ್ (ಎಜ್ಯುಕೇಷನ್) ಭಾಸ್ಕರ್ ವಿಷ್ಣು ಭಟ್ಟ ಹಾಗು ಅಲಕಾ ಭಟ್ಟ ದಂಪತಿಯ ಕಿರಿಯ ಪುತ್ರಿ ಬಿ ಕೃತಿ, ತಮ್ಮ ಇಂಜಿನಿಯರಿಂಗ್ ಪದವಿ ಬಳಿಕ ಎರಡು ವರ್ಷಗಳ ಕಾಲ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿ ನಂತರ ಯುಪಿಎಸ್ಸಿ ಪರೀಕ್ಷೆ ಎದುರಿಸಿ, ಇದೀಗ 297ನೇ ಸ್ಥಾನದೊಂದಿಗೆ ತೇರ್ಗಡೆಯಾಗಿದ್ದಾರೆ.
ಉತ್ತರ ಕನ್ನಡ ಹೆಮ್ಮೆಪಡುವ ಸಾಧನೆ ಮಾಡಿರುವ ಇವರಿಗೆ ಜನತೆಯಿಂದ ಶುಭಾಶಯದ ಸುರಿಮಳೆಯೇ ಸಂದಿದೆ.