ಹೊನ್ನಾವರ : ಉತ್ತರ‌ಕನ್ನಡದ ಹಲವೆಡೆ ಮಳೆಯ ಆರ್ಭಟ ಜೋರಾಗಿದ್ದು ರಸ್ತೆಗಳಲ್ಲಿ ನೀರು ತುಂಬುತ್ತಿದೆ. ಇದರಿಂದ ಪ್ರಾಣ ಹಾನಿಯಂತಹ ಅಪಾಯವೂ ಎದುರಾಗಿದೆ.

ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹೊನ್ನಾವರ ತಾಲೂಕಿನ ಕಡ್ನೀರು ಮೂಲದ ಸಂತೋಷ ಮೋಹನ ನಾಯ್ಕ ತನ್ನ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ರಸ್ತೆಗೆ ನುಗ್ಗುತ್ತಿದ್ದ ನೀರನ್ನು ಅಂದಾಜಿಸಲಾಗದೇ, ಆಯತಪ್ಪಿ ಬಿದ್ದು ಬೈಕ್ ಸಮೇತ ನೀರಿನಲ್ಲಿ ಕೊಚ್ಚಿಹೋದ ದುರ್ಘಟನೆ ಸಂಭವಿಸಿದೆ.

RELATED ARTICLES  ಬಾಳಿಗಾ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನ

ಈತನು ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾ.ಪಂ ವ್ಯಾಪ್ತಿಯ ಕಲ್ಲೇಶ್ವರದ ಒರ್ವ ತೋಟದ ಮಾಲಿಕರ ಬಳಿ ಕೃಷಿ ಕೂಲಿಕೆಲಸ ಮಾಡಿಕೊಂಡು ತನ್ನ ಹೆಂಡತಿ, ಮಕ್ಕಳೊಂದಿಗೆ ವಾಸವಾಗಿದ್ದ ಎನ್ನಲಾಗಿದೆ.

ಸಂತೋಷ ನಾಯ್ಕ ಈತನನ್ನು ಕಾಣಲು ಬಂದಿದ್ದ ಸಹೋದರ ಮಾವ ಸೀತಾರಾಮ ನಾಗಪ್ಪ ನಾಯ್ಕ, ತನ್ನೂರು ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದ ಈ ವೇಳೆ ತನ್ನ ಮಾವನಿಗೆ ಬಸ್ ಹತ್ತಿಸಲು ಗುಳ್ಳಾಪುರದ ರಾಷ್ಟ್ರೀಯ ಹೆದ್ದಾರಿ ತನಕ ಬೈಕನಲ್ಲಿ ಡ್ರಾಪ್‍ಕೊಡಲು ಸಂತೋಷ ಮುಂದಾಗಿದ್ದ ಎನ್ನಲಾಗಿದೆ.

RELATED ARTICLES  ದಾಂಡೇಲಿಯಲ್ಲಿ ವಿವೇಕಾನಂದ ಜಯಂತಿಯ ಪ್ರಯುಕ್ತ ಬೈಕ್ ರ್ಯಾಲಿ ಇಂದು