ಕಾರವಾರ: ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ
120 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಕಾರವಾರದಲ್ಲಿ 13, ಅಂಕೋಲಾ 3, ಕುಮಟಾ 14, ಭಟ್ಕಳದಲ್ಲಿ 7, ಹೊನ್ನಾವರದಲ್ಲಿ‌ 15, ಶಿರಸಿಯಲ್ಲಿ 6, ಸಿದ್ದಾಪುರ 3, ಹಳಿಯಾಳದಲ್ಲಿ 59 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಇಂದು 79 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು ಕಾರವಾರದಲ್ಲಿ 8, ಹೊನ್ನಾವರ, ಶಿರಸಿ, ಜೊಯಿಡಾದಲ್ಲಿ ತಲಾ 1, ಭಟ್ಕಳ, ಮುಂಡಗೋಡದಲ್ಲಿ ತಲಾ 10, ಯಲ್ಲಾಪುರದಲ್ಲಿ 7, ಹಳಿಯಾಳದಲ್ಲಿ 41, ಯಲ್ಲಾಪುರದಲ್ಲಿ 7 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಹಳಿಯಾಳದಲ್ಲಿ ಇಂದು ಅತೀ ಹೆಚ್ಚು ಅಂದರೆ 59 ಪ್ರಕರಣ ವರದಿಯಾಗಿದೆ.

ಹೊನ್ನಾವರದಲ್ಲಿ 15, ಕುಮಟಾದಲ್ಲಿ 14 ಜನರಿಗೆ ಕೊರೋನಾ ಪಾಸಿಟೀವ್..

RELATED ARTICLES  ಶಿರಸಿಯಲ್ಲಿ ಅದ್ಧೂರಿಯಾಗಿ ನಡೆದ ಯುವಜನೋತ್ಸವ!

ಹೊನ್ನಾವರ : ತಾಲೂಕಿನ ಟೊಂಕದ 25 ವರ್ಷದ ಮಹಿಳೆ, 42 ವರ್ಷದ ಮಹಿಳೆ, 12 ವರ್ಷದ ಯುವತಿ, 23 ವರ್ಷದ ಯುವತಿ, 36 ಮತ್ತು 38 ವರ್ಷದ ಪುರುಷ, 42 ವರ್ಷದ ಮಹಿಳೆ, 46 ವರ್ಷದ ಪುರುಷ ಹೀಗೆ ಟೊಂಕ ಭಾಗದಲ್ಲೇ 14 ಕೇಸ್ ಇಂದು ದಾಖಲಾಗಿದೆ.ಇನ್ನು ಕಾಸರಕೋಡಿನ 30 ವರ್ಷದ ಪುರುಷನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಕುಮಟಾ ತಾಲೂಕಿನ ಕೊಡ್ಕಣಿಯಲ್ಲಿ 4 ಪ್ರಕರಣ, ಕಲಭಾಗನಲ್ಲಿ 3 ಪ್ರಕರಣ ಹಾಗೂ ಸಂತೇಗುಳಿ, ಅಳ್ವೆದಂಡೆ, ಹಳಕಾರ, ಹೊನ್ಮಾವ್ ಮುಂತಾದ ಪ್ರದೇಶದಲ್ಲಿ ತಲಾ ಒಂದೊಂದು ಕೊರೋನಾ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಇಂದು ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

RELATED ARTICLES  ಟಿಪ್ಪು ಜಯಂತಿಗೆ ಬಿತ್ತು ಬ್ರೇಕ್: ಬಿಜೆಪಿ ಸರ್ಕಾರದ ಹೊಸ ಆದೇಶ..!

ಕೊಡ್ಕಣಿಯ 34 ವರ್ಷದ ಪುರುಷ, ಕೊಡ್ಕಣಿಯ 45 ವರ್ಷದ ಪುರುಷ, ಕೊಡ್ಕಣಿಯ 35 ವರ್ಷದ ಮಹಿಳೆ, ಕೊಡ್ಕಣಿಯ 18 ವರ್ಷದ ಮಹಿಳೆ, ಕಲಭಾಗ್‍ನ 10 ವರ್ಷದ ಬಾಲಕಿ, ಕಲಭಾಗ್‍ನ 72 ವರ್ಷದ ವೃದ್ಧ, ಕಲಭಾಗ್‍ನ 61 ವರ್ಷದ ಮಹಿಳೆ, ಕುಮಟಾದ 34 ವರ್ಷದ ಪುರುಷ, 62 ವರ್ಷದ ಪುರುಷ, 60 ವರ್ಷದ ಮಹಿಳೆ, ಹೊನ್ಮಾವಿನ 45 ವರ್ಷದ ಮಹಿಳೆ, ಹಳಕಾರದ 19 ವರ್ಷದ ಬಾಲಕ, ಅಳ್ವೆದಂಡೆಯ 51 ವರ್ಷದ ಪುರುಷ, ಸಂತೇಗುಳಿಯ 24 ವರ್ಷದ ಮಹಿಳೆಯಲ್ಲಿ ಸೋಂಕು ತಗುಲಿದೆ ಎಂದು ವರದಿಯಾಗಿದ್ದು
ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 14 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.