ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 117 ಕೊರೋನಾ ಪ್ರಕರಣಗಳು ವರದಿಯಾಗಿದೆ.

ಕಾರವಾರದಲ್ಲಿ 43, ಅಂಕೋಲಾ 3, ಭಟ್ಕಳದಲ್ಲಿ 5, ಹೊನ್ನಾವರದಲ್ಲಿ‌ 16, ಶಿರಸಿಯಲ್ಲಿ 2, ಮುಂಡಗೋಡದಲ್ಲಿ 11, ಹಳಿಯಾಳದಲ್ಲಿ 37 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.

ಇಂದು 69 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು ಕಾರವಾರದಲ್ಲಿ 4, ಕುಮಟಾ 10, ಹೊನ್ನಾವರ 2, ಭಟ್ಕಳ 9, ಹಳಿಯಾಳದಲ್ಲಿ 44 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

RELATED ARTICLES  ಮುಂಗಾರು ಪ್ರವೇಶ – ರಾಜ್ಯಾದ್ಯಾಂತ ಮುಂದಿನ 3, 4 ದಿನ ಭಾರೀ ಮಳೆ ಸಾಧ್ಯತೆ.

ಕಾರವಾರದಲ್ಲಿ ಅತಿ ಹೆಚ್ಚು ಪ್ರಕರಣ ವರದಿಯಾಗಿದೆ. ಹೊನ್ನಾವರದಲ್ಲಿ ೧೬ ಪ್ರಕರಣ ಪತ್ತೆಯಾಗಿದೆ. ಪಟ್ಟಣದ ಒಂದು ಪ್ರಕರಣ, ಹಡಿನಬಾಳದ ೨೨, ೪೬, ೫೫ ವರ್ಷದ ಪುರುಷ ಹಾಗೂ ೫೦, ೩೮, ೫೫ ವರ್ಷದ ಮಹಿಳೆ ಸೇರಿದಂತೆ ಒಟ್ಟು ೬ ಪ್ರಕರಣ ಪತ್ತೆಯಾಗಿದೆ. ಕರ್ಕಿಯ ೭೯, ೬೮, ೪೫, ೫೫, ೬೫ ವರ್ಷದ ಮಹಿಖಳೆಯಲ್ಲಿ ಹಾಗೂ ೮೫ ವರ್ಷದ ಪುರುಷ ಸೇರಿ ಒಟ್ಟು ೬ ಸೋಂಕು ಪ್ರಕರಣ ವರದಿಯಾಗಿದೆ. ಕುಳ್ಕೂಡಿನ ೨೫ವರ್ಷದ ಮಹಿಳೆ, ಕಾವುರಿನ ೩೨ ವರ್ಷದ ಪುರುಷ ಹೆರೆಂಗಡಿಯ ೪೫ವರ್ಷದ ಪುರುಷ, ಪ್ರಭಾತನಗರದ ೨೩ ವರ್ಷದ ಪುರುಷನಲ್ಲಿ ಸೋಂಕು ದೃಡವಾಗಿದೆ.

RELATED ARTICLES  ಶ್ರೀ ಶ್ರೀ ಗುರುಪಾದ ಸ್ವಾಮಿಗಳಿಗೆ ಗೋಕರ್ಣ ಗೌರವ.