ಕಾರವಾರ : ತಾಲೂಕಿನ ಶಿರವಾಡದ ಜಾಂಬಾ ಬಳಿ ಈಜಲು ಹೋದ ದರ್ಶನ ದೊಡ್ಮನಿ ಎನ್ನುವಾತ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಈಜಲು ತೆರಳಿದ 16 ವರ್ಷದ ಬಾಲಕ ಈಜು ಬರದೇ ಗೆಳೆಯರೊಂದಿಗೆ ನೀರಿಗಿಳಿದಿದ್ದು, ಆಯತಪ್ಪಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಚಿತ್ತಾಕುಲದಲ್ಲಿ ವಾಸ್ತವ್ಯ ಹೂಡಿದ್ದ ಹಾವೇರಿ ಮೂಲದ ಬಾಲಕ ಎಂದು ತಿಳಿದುಬಂದಿದೆ. ಮಳೆಯ ಹಾಗೂ ನೀರಿನ ಮಟ್ಟ ಹೆಚ್ಚಿದ್ದಾಗ ನೀರಿಗಿಳಿದಿದ್ದು ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.