ಗೋಕರ್ಣ: ಇಲ್ಲಿನ ಬೇಲೆಹಿತ್ಲ ಹೋಬಳಿಯ ಮಹಾಗಣಪತಿ ಸಮಾಜ ಸೇವಾ ಸಂಘ ಕಡಲ ಕಿನಾರೆಗೆ ಸಾಗುವ ರಸ್ತೆಯಲ್ಲಿ ಅಗತ್ಯತೆಯ ಕಡೆ ವಿದ್ಯುತ್ ಕಂಬಕ್ಕೆ ಝಗಮಗಿಸುವ ಬೆಳಕು ಚೆಲ್ಲುವ ಲೈಟ್ ಅಳವಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹೆಸ್ಕಾಂ ವಿಭಾಗದ ವೆಂಕಟೇಶ ಗೌಡ ಹಾಗು ಸಿಬ್ಬಂದಿಗಳ ಸಹಕಾರದಿಂದ ಕಂಬಕ್ಕೆ ಈ ಮಕ್ರ್ಯೂರಿ ಲೈಟ್ ಅಳವಡಿಸಲಾಗಿದೆ.  ಗಣೇಶನ ವಿಸರ್ಜನೆ ಸಮುದ್ರದ  ಕಡಲಲ್ಲಿ ನಡೆಯಲಿದ್ದು  ಈ ಬೆಳಕು ವಿಸರ್ಜನಾ ಮೆರವಣಿಗೆಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಪ್ರವಾಸಿಗರಿಗೂ ರಾತ್ರಿವೇಳೆ ಅನುಕೂಲವಾಗಲಿದೆ. ಈ ಸ್ಥಳ ರಾತ್ರಿ  ನಿರ್ಜನವಾಗಿದ್ದು ಈಗ ಬೆಳಕು ಚೆಲ್ಲಲಿದೆ.

RELATED ARTICLES  ಚೈತನ್ಯಾ ಚಿತ್ರಿಸಿದ ಚಿತ್ರಿಗಿ ಪ್ರೌಢಶಾಲಾವರಣದ ಚಿತ್ರ ರಾಜ್ಯಮಟ್ಟಕ್ಕೆ