ಕಾರವಾರ : ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ 59 ಮಂದಿಗೆ ಕೊರೋನಾ ಪಾಸಿಟೀವ್ ಕಾಣಿಸಿಕೊಂಡಿದೆ. ಯಲ್ಲಾಪುರ 24, ಕಾರವಾರದಲ್ಲಿ 5, ಅಂಕೋಲಾ 1, ಕುಮಟಾ 3, ಭಟ್ಕಳ 1, ಶಿರಸಿ 2, ಸಿದ್ದಾಪುರ 3, ಮುಂಡಗೋಡ 1, ಜೋಯಿಡಾ 1 ಹಾಗೂ ಹಳಿಯಾಳದಲ್ಲಿ 18 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಜಿಲ್ಲೆಯಲ್ಲಿ ಒಟ್ಟು 2782 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅದರಲ್ಲಿ 1887 ಮಂದಿ ಗುಣಮುಖರಾಗಿದ್ದರೆ 869 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 35 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 3, ಅಂಕೋಲಾ, ಹೊನ್ನಾವರ, ಭಟ್ಕಳ ತಲಾ 7, ಹಳಿಯಾಳ 10 ಹಾಗೂ ಕುಮಟಾದಲ್ಲಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕುಮಟಾ ತಾಲೂಕಿನಲ್ಲಿ ಇಂದು ಕಂಡು ಬಂದಿರುವ ಪ್ರಕರಣ ಧಾರೇಶ್ವರ ಸಮೀಪದವರು ಎನ್ನಲಾಗಿದೆ. ಧಾರೇಶ್ವರದ 63 ವರ್ಷದ ಮಹಿಳೆ, ಧಾರೇಶ್ವರದ 65 ವರ್ಷದ ಪುರುಷ, ಧಾರೇಶ್ವರದ 67 ವರ್ಷದ ಪುರುಷನಲ್ಲಿ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.