ಕುಮಟಾ : ಕೋವಿಡ್ 19 ರೋಗಕ್ಕೆ ತುತ್ತಾಗುವವರ ಸಂಖ್ಯೆ ದಿನೇ ದಿನೇ ಸಮಾಜದಲ್ಲಿ ಹೆಚ್ಚುತ್ತಿದ್ದು, ಪೆಟ್ರೋಲ್ ಬಂಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರ/ ವಾಹನ ಸವಾರರ ಸಂಪರ್ಕಕ್ಕೆ ಬರುವವರಾಗಿದ್ದಾರೆ. ಈ ಕಾರಣಕ್ಕಾಗಿ ಇವರ ಸುರಕ್ಷತೆ ಅತ್ಯಂತ ಪ್ರಮುಖವಾದದ್ದು, ಈ ದಿಸೆಯಲ್ಲಿ ಕುಮಟಾ ಲಯನ್ಸ್ ಕ್ಲಬ್ ವತಿಯಿಂದ ಕುಮಟಾ ಪಟ್ಟಣದ ವಿವಿಧ ಪೆಟ್ರೋಲ್ ಬಂಕ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಉಚಿತ ಪೇಸ್ ಶೀಲ್ಡ್ ವಿತರಿಸುವ ಕಾರ್ಯಕ್ರಮ ನಡೆಯಿತು.

RELATED ARTICLES  ಉತ್ತರ ಕನ್ನಡದ ಪ್ರಮುಖ ತಾಲೂಕಿನ ಕೊರೋನಾ ವಿವರ

ಕಾರ್ಯಕ್ರಮದಲ್ಲಿ ಲಯನ್ಸ್ ಕುಮಟಾದ ಅಧ್ಯಕ್ಷೆ ವಿನಯಾ ಹೆಗಡೆ, ಕಾರ್ಯದರ್ಶಿ ಡಾ. ಎಸ್ ಎಸ್ ಹೆಗಡೆ, ಸದಸ್ಯರಾದ ಡಾ.ನಾಗರಾಜ ಭಟ್ ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಕಾರ್ಯಕ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES  ಅಭಿವೃದ್ಧಿಯ ಮುಂದಾಲೋಚನೆಯುಳ್ಳ ವ್ಯಕ್ತಿ ನಿವೇದಿತ್ ಆಳ್ವಾ.