ಕುಮಟಾ: ಬಲಪ್ರಯೋಗದಿಂದ ಅರಣ್ಯ ಅತಿಕ್ರಮಣದಾರರಿಗೆ ದೌರ್ಜನ್ಯವೆದಗಿಸಿ ಉಚ್ಛ ನ್ಯಾಯಾಲಯದ ಅದೇಶವನ್ನು ಉಲ್ಲಂಘಿಸಿ ಯಲ್ಲಾಪುರ ತಾಲೂಕ ಗುಳ್ಳಾಪುರ ಗ್ರಾಮದ ಈರಮ್ಮ ದೇವರಾಜ ಆಚಾರಿ ಅತಿಕ್ರಮಣದಾರಳಿಗೆ ಅತಿಕ್ರಮದಾರಳ ನೂರಾರು ಬಾಳೆಗಿಡ ಕಡಿದ ಅರಣ್ಯ ಸಿಬ್ಬಂದಿಗಳಿಗೆ ಅತೀ ಶೀಘ್ರದಲ್ಲಿ ಅಮಾನತ್ತುಗೋಳಿಸಬೇಕೆಂದು ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಮುಖ್ಯಂತ್ರಿಗಳಿಗೆ ಅಗ್ರಹಿಸಿದೆ.

ತಾಲೂಕಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ನೇತೃತ್ವದಲ್ಲಿ ಸ್ಥಳೀಯ ಉಪವಿಭಾಗ ಅಧಿಕಾರಿ ಅವರ ಮೂಲಕ ಮುಖ್ಯಂಂತ್ರಿಗೆ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ಖಂಡಿಸಿ ಮನವಿ ನೀಡಿದ ಹಿನ್ನೆಲೆಯಲ್ಲಿ ಮೇಲಿನಂತೆ ಅಗ್ರಹಿಸಿದ್ದಾರೆ.

ಅನಾದಿಕಾಲದಿಂದಲೂ ಸದ್ರಿ ಕ್ಷೇತ್ರದ ಕಬಜಾ ಬೋಗ್ವಟೆ ಸಾಗುವಳಿ ಮಾಡಿಕೊಂಡು ಜೀವನ ಮಾಡುತ್ತಿರುವ ಸಂದರ್ಭದಲ್ಲಿ ಈ ಹಿಂದೆ 3-4 ಸಾರಿ ಕಳೆದ 3 ತಿಂಗಳಿನಿಂದಲೂ ಸ್ಥಳೀಯ ಅರಣ್ಯ ಅಧಿಕಾರಿಗಳು, ಎ.ಸಿ.ಎಫ್, ಆರ್.ಎಫ್.ಒ, ಫೋರೆಸ್ಟ, ಗಾರ್ಡ, ವಾಚ್‍ಮೆನ್ ಸ್ಥಳಕ್ಕೆ ಬಂದು ಸಾಗುವಳಿಗೆ ಆತಂಕ ಮಾಡಿದ್ದು ಇದೆ. ಈ ರೀತಿ ಮಾಡಬಾರದೆಂದು ಅವರಿಗೆ ಇಗಾಗಲೇ ಕಾನೂನು ಬದ್ಧ ನೋಟಿಸ್ 25-6-2020 ಕ್ಕೆ ನೀಡಿದ್ದು ಇದೆ. ಅದಾಗಿಯೂ ಸಹಿತ ನೋಟಿಸಿಗೆ ಉತ್ತರ ನೀಡದ್ದು ಇರುವುದಿಲ್ಲ.

RELATED ARTICLES  ಉತ್ತರ ಕನ್ನಡ ಜಿಲ್ಲೆಯ 10 ವಿದ್ಯಾರ್ಥಿಗಳು ವಿಪ್ರೋ ಕಂಪನಿಗೆ ಆಯ್ಕೆ!

ಅರಣ್ಯ ಸಿಬ್ಬಂದಿಗಳ ಕಾರ್ಯ ಖಂಡನಾರ್ಹ, ಅಲ್ಲದೇ ಸಾಂಕ್ರಾಂಮಿಕ ರೋಗ ವಿಶೇಷ ಕಾನೂನಿನ ನಿಯಮನೀತಿ ಉಲ್ಲಂಘಿಸಿ ಸದ್ರಿ ಕಾನೂನು ಪಾಲನೆ ಮಾಡದೇ ಅಪರಾಧ ಮಾಡಿರುವುದು ವಿಷಾದಕರ ಎಂದು ಇಂದು ಮನವಿಯಲ್ಲಿ ಪ್ರಸ್ತಾಪಿಸಿದಲ್ಲದೇ, ಇಗಾಗಲೇ ಅರಣ್ಯ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವವರನ್ನು ಬಂಧಿಸಿ ಅತಿಕ್ರಮಣದಾರಳಿಗೆ ನ್ಯಾಯ ಇದಗಿಸಬೇಕೆಂದು ಮುಖ್ಯಮಂತ್ರಿಗೆ ಕೋರಿದ್ದಾರೆ.

RELATED ARTICLES  ಬ್ಲಾಕ್ ಕಾಂಗ್ರೆಸ್ ಕುಮಟಾದ ಕಛೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆ ಆಚರಣೆ.

ನಿಯೋಗದಲ್ಲಿ ತಾಲೂಕಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ, ರಾಜಕುಪ್ಪ ಭಟ್ಟ ಕತಗಾಲ, ಯಾಕುಬ ಅಹಮ್ಮದ ಸಾಬ ಬೆಟ್ಕುಳಿ, ಮಹೇಂದ್ರ ನಾಯ್ಕ ಕತಗಾಲ, ತಾರಾಬಿ ಬೆಟ್ಕುಳಿ, ರಾಮಚಂದ್ರ ದೇವು ಪಟಗಾರ, ತಿಮ್ಮಯ್ಯ ವೆಂಕಪ್ಪ ಹರಿಕಾಂತ, ಸೀತಾರಾಮ ಮರಾಠಿ ಯಾಣ, ಅಬ್ದುಲ್ ಇಬ್ರಾಹಿಂ ಸಾಬ ಕಿಮಾನಿ, ಸುರೇಶ ಪಟಗಾರ ಹೆಗಡೆ, ಲಕ್ಷ್ಮಣ ಕರಿಕಟ್ಟಿ ಹೆಗಡೆ, ಸುರೇಶ ಗಜಾನನ ಭಟ್ಟ ನಾಗೂರು ಮುಂತಾದವರು ಉಪಸ್ಥಿತರಿದ್ದರು.