ಕಾರವಾರ: ಕಾರವಾರದಲ್ಲಿ 4, ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರದಲ್ಲಿ ತಲಾ 3, ಭಟ್ಕಳದಲ್ಲಿ 6, ಯಲ್ಲಾಪುರದಲ್ಲಿ 2 ಹಾಗೂ ಹಳಿಯಾಳದಲ್ಲಿ 29 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಜಿಲ್ಲೆಯಲ್ಲಿ 53 ಮಂದಿಗೆ ಇಂದು ಕೊರೋನಾ ಪಾಸಿಟಿವ್ ವರದಿಯಾಗಿದೆ.
ಕಾರವಾರದಲ್ಲಿ 4, ಅಂಕೋಲಾದಲ್ಲಿ 7, ಹೊನ್ನಾವರದಲ್ಲಿ 5, ಯಲ್ಲಾಪುರದಲ್ಲಿ ಓರ್ವ ಹಾಗೂ ಹಳಿಯಾಳದಲ್ಲಿ 23 ಸೋಂಕಿತರು ಅಂದರೆ ಇಂದು ಒಟ್ಟೂ 40 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 2,835 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅದರಲ್ಲಿ 1927 ಮಂದಿ ಗುಣಮುಖರಾಗಿದ್ದಾರೆ.