ಕುಮಟಾ: ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಗುಣಾತ್ಮಕ ಶೇಕಡಾ ಫಲಿತಾಂಶವು 78.52 ಆಗಿದ್ದು ಎ ಗ್ರೇಡ್ ಆಗಿ ಹೊರಹೊಮ್ಮಿದೆ. ಪರೀಕ್ಷೆಗೆ ಕುಳಿತ 80 ವಿದ್ಯಾರ್ಥಿಗಳಲ್ಲಿ ಶೇ. 88 ಆಗಿದ್ದು, ಕುಮಾರಿ ರಕ್ಷಿತಾ ಗೋಪಾಲ ಪಟಗಾರ (603), ಲಕ್ಷ್ಮೀಧರ ಗಣಪತಿ ಗೌಡ (587), ಸಿಂಚನಾ ವಿ.ಆಚಾರಿ (576), ಶ್ರೀರಶ್ಮಿ ಮಹಾದೇವ ಭಟ್ಟ (567), ಅಂಕಿತ ಯಶವಂತ ನಾಯ್ಕ (563) ಮೊದಲ ಐದು ಸ್ಥಾನ ಗಳಿಸಿದ್ದಾರೆ. ಕನ್ನಡದಲ್ಲಿ ಐವರು, ಸಂಸ್ಕøತದಲ್ಲಿ ಇಬ್ಬರು ಹಾಗೂ ಹಿಂದಿಯಲ್ಲಿ ಒಬ್ಬರು ಪೂರ್ಣ ಅಂಕಗಳಿಸಿದ್ದಾರೆಂದು ಪ್ರಭಾರ ಮುಖ್ಯಾಧ್ಯಾಪಕ ವಿಷ್ಣು ಭಟ್ಟ ತಿಳಿಸಿದ್ದಾರೆ.