ಎಸ್.ಎಸ್.ಎಲ್.ಸಿ ಪರೀಕೆಗೆ ಕುಳಿತ 32 ವಿದ್ಯಾರ್ಥಿಗಳಲ್ಲಿ 27ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ 84.37% ಆಗಿರುತ್ತದೆ. ಕುಮಾರಿ ಸಂಧ್ಯಾ ಗಂಗಾಧರ ಭಟ್ಟ ಬಪ್ಪನಳ್ಳಿ ಇವಳು ಶೇ 98.88 ಪ್ರತಿಶತ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು, ಕುಮಾರಿ ನೇತ್ರಾವತಿ ರಾಮಚಂದ್ರ ಹೆಗಡೆ ನೇರ್ಲಹದ್ದ ಇವಳು ಶೇ 95.68ಪ್ರತಿಶತ ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನವನ್ನು, ಕುಮಾರಿ ಸಹನಾ ಪ್ರಕಾಶ ಭಟ್ಟ ಹೊಸ್ಮನೆ ಇವಳು ಶೇ 95.04 ಪ್ರತಿಶತ ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

RELATED ARTICLES  ಶ್ರೀ ಸಿದ್ಧಿವಿನಾಯಕ ವಿವಿದುದ್ದೇಶ ವಿದ್ಯಾ ಪ್ರಸಾರ ಮಂಡಳಿ ಪ್ರತಿಭೋತ್ಸವ


07ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ
12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ
8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.


ಈ ಕುರಿತು ಆಡಳಿತ ಮಂಡಳಿಯ ಅಧ್ಯಕ್ಷರು ಸಾಮಾಜಿಕ ಚಿಂತಕರೂ ಆದ ಶ್ರೀ ವಿಶ್ವನಾಥ ಶರ್ಮಾ ನಾಡಗುಳಿ ಮತ್ತು ಆಡಳಿತ ಮಂಡಳಿಯ ಸದಸ್ಯರುಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಎಂ.ಜಿ.ಹೆಗಡೆ ಮತ್ತು ಶಿಕ್ಷಕ-ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿರುತ್ತಾರೆ.

RELATED ARTICLES  ಚೈತ್ರಾ ಗೌಡರವರ ಪರಿಶೃಮದಿಂದ 50 ಕ್ಕೂ ಹೆಚ್ಚು ಮಹಿಳೆಯರು ಕುಮಾರ ಸ್ವಾಮಿ ಎದುರು ಜೆಡಿಎಸ್ ಸೇರ್ಪಡೆ ಗೊಳ್ಳರಿದ್ದಾರೆ!