ಯಲ್ಲಾಪುರ: ತಾಲೂಕಿನ ಬಿಸಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.84.61 ರಷ್ಟು ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 26 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸ್ನೇಹಾ ಡಿ. ಭಟ್ಟ ಶೇ.98.56 ಅಂಕ ಪಡೆದು ಪ್ರಥಮ, ಸ್ವಾತಿ.ವಿ.ಭಟ್ಟ ಶೇ.98.08 ಅಂಕ ಪಡೆದು ದ್ವಿತೀಯ ಹಾಗೂ ಅಶ್ವಿನಿ ಗಣಪತಿ ಕರುಮನೆ ಶೇ.96.48 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.