ಅಂಕೋಲಾ: ತಾಲೂಕಿನ ಹಳವಳ್ಳಿಯ ತೇಜಸ್ ಸುಬ್ರಾಯ ಭಟ್ಟ ಇವನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 619 (99.04)ಅಂಕ ಗಳಿಸಿ ತನ್ನ ಊರಿಗೂ ಹಾಗೂ ಶಾಲೆಗೂ ಕೀರ್ತಿ ತಂದಿದ್ದಾನೆ.
ಇವನು ಯಲ್ಲಾಪುರದ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿಧ್ಯಾರ್ಥಿಯಾಗಿದ್ದು, ಪಶು ವೈದ್ಯ ಡಾ.ಸುಬ್ರಾಯ ಭಟ್ಟ ಹಾಗೂ ದೀಪಾ ಭಟ್ಟ ದಂಪತಿಗಳ ಮಗನಾಗಿದ್ದಾನೆ. ಈತನ ಸಾಧನೆಗೆ ಶಾಲಾ ಶಿಕ್ಷಕರು, ಪಾಲಕರು, ಹಳವಳ್ಳಿ ಊರ ನಾಗರಿಕರು ಅಭಿನಂದಿಸಿದ್ದಾರೆ