ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ 99 ಕೋವಿಡ್ ಪ್ರಕರಣಗಳು ವರದಿಯಾಗಿದೆ.
ಕಾರವಾರದಲ್ಲಿ 14, ಕುಮಟಾ 4, ಭಟ್ಕಳದಲ್ಲಿ 15, ಹೊನ್ನಾವರದಲ್ಲಿ 20, ಶಿರಸಿಯಲ್ಲಿ 5, ಸಿದ್ದಾಪುರ 1, ಹಳಿಯಾಳದಲ್ಲಿ 27, ಮುಂಡಗೋಡದಲ್ಲಿ 6, ಜೊಯಿಡಾದಲ್ಲಿ 7 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
74 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 20, ಮುಂಡಗೋಡದಲ್ಲಿ 23, ಯಲ್ಲಾಪುರದಲ್ಲಿ 5, ಹಳಿಯಾಳದಲ್ಲಿ 26 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯ 3,009 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 2,070 ಮಂದಿ ಗುಣಮುಖರಾಗಿದ್ದಾರೆ.