ಭಟ್ಕಳ : ಮುರ್ಡೇಶ್ವರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಪ್ರಸಕ್ತ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟೂ 43 ಜನ ಪರೀಕ್ಷೆ ಬರೆದಿದ್ದು,ಅದರಲ್ಲಿ 42 ಜನ ಉತ್ತೀರ್ಣರಾಗುವ ಮೂಲಕ 97.67% ಫಲಿತಾಂಶ ಪಡೆದಿರುತ್ತದೆ.ಕು.ಮಹೇಶ ಕಮಲಾಕರ ಮಡಿವಾಳ ಈತನು 585 ಅಂಕ ಪಡೆದು 93.60% ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿರುತ್ತಾನೆ.
ಕು.ವಾಣಿ ಶ್ರೀಧರ ನಾಯ್ಕ ಇವಳು 574 ಅಂಕ ಪಡೆದು 91.84% ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿರಾತ್ತಳೆ.ಕು.ಪ್ರಶಾಂತ ಸುರೇಶ ಮಡಿವಾಳ ಮತ್ತು ಕು.ದಿವ್ಯಾ ನಾರಾಯಣ ಗೌಡ ಇಬ್ಬರೂ 563 ಅಂಕ ಪಡೆಯುವ ಮೂಲಕ 93.08% ಪಡದು ತೃತೀಯ ಸ್ಥಾನ ಪಡೆದಿರುತ್ತಾರೆ.ಪಾಸಾದ ಒಟ್ಟೂ 42 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುತ್ತಾರೆ.26 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಪ್ರಥಮ ಭಾಷೆ ಕನ್ನಡದಲ್ಲಿ ಕು.ದಿವ್ಯಾ ನಾರಾಯಣ ಗೌಡ,ಕು.ಸೌಮ್ಯ ಸತೀಶ ನಾಯ್ಕ,ಕು.ವಾಣಿ ಶ್ರೀಧರ ನಾಯ್ಕ ಇವರುಗಳು 125ಕ್ಕೆ 125 ಅಂಕ ಪಡೆದಿರುತ್ತಾರೆ.ತೃತೀಯ ಭಾಷೆ ಹಿಂದಿಯಲ್ಲಿ ಕು.ಕಾರ್ತಿಕ ಕೃಷ್ಣ ನಾಯ್ಕ,ಕು.ಸೌಮ್ಯ ಸತೀಶ ನಾಯ್ಕ ಇವರುಗಳು 100ಕ್ಕೆ 100 ಅಂಕ ಪಡೆದಿರುತ್ತಾರೆ.ವಿದ್ಯಾರ್ಥಿಗಳು ಉತ್ತಮ ಸಾಧನೆಯ ಮೂಲಕ ಶಾಲೆಗೆ ಕೀರ್ತಿ ತಂದಿರುತ್ತಾರೆ.