ಕಾರವಾರ : ಉತ್ತರಕನ್ನಡ ಜಿಲ್ಲೆಯ 59 ಮಂದಿಗೆ ಇಂದು ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ.ಕಾರವಾರದಲ್ಲಿ 1, ಅಂಕೋಲಾ 4, ಕುಮಟಾ 7,ಹೊನ್ಮಾವರ 1, ಭಟ್ಕಳ 8, ಶಿರಸಿ 6, ಸಿದ್ದಾಪುರ 8, ಮುಂಡಗೋಡ 2, ಜೋಯಿಡಾ 4, ಹಾಗೂ ಹಳಿಯಾಳದಲ್ಲಿ 18 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.

RELATED ARTICLES  ಸಿದ್ದರಾಮಯ್ಯ ಸರಕಾರದಿಂದ ಆಗಿರುವಷ್ಟು ಅಭಿವೃದ್ಧಿ ಮತ್ತೆ ಯಾರಿಂದಲೂ ಆಗಿಲ್ಲ: ದೇಶಪಾಂಡೆ

ಕೊರೋನಾ ಸೋ‌ಂಕಿಗೆ ಜಿಲ್ಲೆಯ ಭಟ್ಕಳ ಹಾಗೂ ಶಿರಸಿಯಲ್ಲಿ ಇಬ್ಬರು ಬಲಿಯಾಗಿದ್ದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗುವ ಮೂಲಕ ಜನತೆಗೆ ಮತ್ತೊಮ್ಮೆ ಭಯದ ವಾತಾವರಣ ನಿರ್ಮಾಣವಾಗಿದೆ.

ಕಾರವಾರದಲ್ಲಿ 6, ಅಂಕೋಲಾದಲ್ಲಿ 3, ಹೊನ್ನಾವರದ 4, ಭಟ್ಕಳದ 5, ಶಿರಸಿ 5, ಹಳಿಯಾಳದ 8, ಯಲ್ಲಾಪುರದ 10, ಹಾಗೂ ಮುಂಡಗೋಡಿನ 2 ಮಂದಿ 43 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

RELATED ARTICLES  " ಕೋವಿಡ್ 19, ಮಂಗನಕಾಯಿಲೆ ಹಾಗೂ ಕುಡಿಯುವ ನೀರಿನ ಸಂಬಂಧಿಸಿದಂತೆ ಪ್ರಗತಿಪರಿಶೀಲನಾ ಸಭೆ "

ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 3068 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅದರಲ್ಲಿ 2113, ಮಂದಿ ಗುಣಮುಖರಾಗಿದ್ದರೆ 926 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.