ಕುಮಟಾ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚಿದಾನಂದ ಭಂಡಾರಿ ಕಾಗಾಲ ಯವರು ರಚಿಸಿದ ಕೊಂಕಣಿ ದೇಶಭಕ್ತಿಯು ಲೋಕಾರ್ಪಣೆ ಅಗಸ್ಟ್ 14 ರ ಮಧ್ಯರಾತ್ರಿ ನಡೆಯಲಿದೆ.
ಭಾರತದ ಭವ್ಯತೆಯನ್ನು ವರ್ಣಿಸಿ ಬರೆದಿರುವ ನಿವೇದನಾ ಎಂಬ ಗೀತೆಗೆ ಉತ್ತರಕನ್ನಡಜಿಲ್ಲೆಯ ಹೊನ್ನಾವರ ತಾಲೂಕಿನವರಾದ ಖ್ಯಾತಗಾಯಕಿ ಡಾಕ್ಟರ್ ಸಂಪದಾ ಭಟ್ ಮರಬಳ್ಳಿ ಇವರು ಸಂಗೀತ ಅಳವಡಿಸಿ ಸೊಗಸಾಗಿ ಹಾಡಿರುತ್ತಾರೆ. ಸಂಪದಾ ಭಟ್ ಅವರು ಈಗಾಗಲೇ ಹಲವಾರು ಕೊಂಕಣಿ ಸಾಹಿತ್ಯಕ್ಕೆ ರಾಗ ಅಳವಡಿಸಿ ಹಾಡಿ ಜನಪ್ರಿಯತೆ ಗಳಿಸುವುದರ ಮೂಲಕ ಅನೇಕ ಸಾಹಿತಿಗಳನ್ನು ಬೆಳಕಿಗೆ ತಂದಿರುತ್ತಾರೆ.
ಕೊಂಕಣಿಯಲ್ಲಿ ರಾಗಸಂಯೋಜನೆ ಮಾಡಿ ಹಾಡಿ ದಾಖಲಿಸಿರುವ ದೇಶ ಭಕ್ತಿಗೀತಗಳು ವಿರಳವಾಗಿರುವ ಹಿನ್ನೆಲೆಯಲ್ಲಿ ಚಿದಾನಂದ ಭಂಡಾರಿಯವರ ಈ ಪ್ರಯತ್ನ ಕೊಂಕಣಿ ಸಾಹಿತ್ಯಕ್ಷೇತ್ರದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಲಿದೆ ಎನ್ನಲಾಗುತ್ತಿದೆ.
ಮೂಲತಃ ಉತ್ತರಕನ್ನಡ ಜಿಲ್ಲೆಯಲ್ಲಿ ವಾಸವಾಗಿರುವ ಕೊಂಕಣಿ ಹಿಂದುಳಿದ ಪಂಗಡಗಳಲ್ಲಿ ಒಂದಾದ ದೇಶ ಭಂಡಾರಿ ಸಮುದಾಯದಿಂದ ಹೊರಹೊಮ್ಮಿದ ಭರವಸೆಯ ಪ್ರತಿಭೆಯಾದ ಚಿದಾನಂದ ಭಂಡಾರಿ ಇವರು ಕುಮಟಾದ ಕೊಂಕಣ ಎಜ್ಯಕೇಶನ್ ಟ್ರಸ್ಟಿನ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ ಯಕ್ಷಗಾನ ನಾಟಕದ ಕಲಾವಿದರಾಗಿ ಕನ್ನಡ ಹಾಗೂ ಕೊಂಕಣಿಯ ಬರಹಗಾರರಾಗಿ ಹೆಸರುಗಳಿಸುತ್ತಿರುವ ಇವರು ಜಿಲ್ಲೆಯ ಉತ್ತಮವಾಗ್ಮಿಗಳಲ್ಲಿ ಒಬ್ಬರಾಗಿದ್ದಾರೆ.
ಅಗಸ್ಟ್ ಹದಿನೈದರ ಸಂಭ್ರಮದಂದು ಯ್ಯೂಟ್ಯೂಬ್ ಚಾನಲ್ ಮೂಲಕ ಹೇ,,,ಮಾತೃ ಭೂಮಿ ತುಗೆಲ ಚರಣಾಂಕು ಎಂಬಗೀತೆಯನ್ನು ಡಾ, ಸಂಪದಾ ಭಟ್ ಮರಬಳ್ಳಿಯವರು ಲೋಕಾರ್ಪಣೆ ಮಾಡಲಿದ್ದಾರೆ.ರಂಜನ್ ಕುಮಾರ್ ಬೇಊರಾ ಅವರು ಸಂಗೀತ ನಿರ್ದೇಶನ ಮಾಡಿರುವ ಈ ಗೀತೆಯು ಖ್ಯಾತ ಚಲನಚಿತ್ರ ನಟ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಹಿಂದಿನ ಅಧ್ಯಕ್ಷರಾದ ಕಾಸರಗೋಡು ಚಿನ್ನಾ ಅವರ ಮಾರ್ಗದರ್ಶನದಲ್ಲಿ ಬಿಡುಗಡೆಯಾಗುತ್ತಿದೆ.