ಭಟ್ಕಳ :  Phone pay App ಬಳಸುವ ಗ್ರಾಹಕರಿಗೆ ಮುರುಡೇಶ್ವರ ಪೊಲೀಸ ಠಾಣೆ ಯಿಂದ ಎಚ್ಚರಿಕೆ ಮಾಹಿತಿ ನೀಡಿದ್ದು ಈ ಬಗ್ಗೆ  ಗ್ರಾಹಕರು ಎಚ್ಚರಿಕೆ ವಹಿಸಬೇಕಾಗಿದೆ. ಅನೇಕ ಸೈಬರ್ ಕ್ರೈಂ ನಂತಹ ಪ್ರಕರಣ ವರದಿಯಾಗುತ್ತಿದ್ದು ಈ ಸೂಚನೆ ಮಹತ್ವ ಎನಿಸಿದೆ.

6289474895 ಈ ಅನಾಮಧೇಯ ನಂಬರಿನಿಂದ ಕರೆ ಮಾಡಿ ನಾನು Phone pay ಗ್ರಾಹಕರ ಸೇವಾ ಕೇಂದ್ರದಿಂದ ಮಾತನಾಡುತ್ತಿರುವುದು, ನಮ್ಮ ಎಲ್ಲಾ Phone pay ಗ್ರಾಹಕರಿಗೆ covid-19 ವಿಮಾ ಕೇಂದ್ರದಿಂದ 5000 ರೂಪಾಯಿ ಸಿಗುತ್ತಿದ್ದು, ಆ ಹಣವನ್ನು ಪಡೆದುಕೊಳ್ಳಲು ನಾವು ನಿಮಗೆ To-pay ಎನ್ನುವ ಲಿಂಕನ್ನು ಕಳುಹಿಸುತ್ತೇವೆ ಎಂದು ಆ ಲಿಂಕನ್ನು ಕಳುಹಿಸಲಾಗುತ್ತದೆ. ಒಂದು ವೇಳೆ ಅವರು ಕಳುಹಿಸಿದ To-pay ಲಿಂಕನ್ನು ತೆರೆದರೆ ಕೂಡಲೇ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣ ಡ್ರಾ ಆಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ.

RELATED ARTICLES  ಸುಳ್ಳು ಮಾಹಿತಿ ನೀಡಿ ಪೆಟ್ರೋಲ್ ಪಡೆದ ವ್ಯಕ್ತಿ ಈಗ ಪೋಲೀಸರ ಅತಿಥಿ

ಆದ್ದರಿಂದ 6289474895 ನಂಬರಿನಿಂದ ಕರೆ ಬಂದರೆ ಸ್ವೀಕರಿಸಬಾರದೆಂದು ಮುರುಡೇಶ್ವರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.