ಕುಮಟಾ : ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 619 ಅಂಕಗಳಿಸುವ ಮೂಲಕ ರಾಜ್ಯಕ್ಕೆ 7ನೇ ಸ್ಥಾನ ಗಳಿಸಿರುವ ಕುಮಟಾ ಕೊಂಕಣ ಎಜುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ಅಕ್ಷಯ್ ಅನಿಲ್ ನಾಯ್ಕ ಇವರನ್ನು ಮಲ್ಲಾಪುರದಲ್ಲಿಯ ಅವರ ಸ್ವಗೃಹದಲ್ಲಿ ಭೇಟಿಯಾಗಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಇತರರು ಸನ್ಮಾನಿಸಿದರು.
ಅವರ ಮುಂದಿನ ವಿದ್ಯಾಭ್ಯಾಸ ಹಾಗೂ ಜೀವನಕ್ಕೆ ಶುಭಹಾರೈಸಿ, ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಪ್ರೋತ್ಸಾಹಧನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ವಿ.ಎಲ್.ನಾಯ್ಕ, ಎಂಟಿ.ನಾಯ್ಕ, ಮುಜಾಫರ್ ಸಾಬ್, ವಿನಾಯಕ ಶೇಟ್, ಜಗದೀಶ್ ಹರಿಕಂತ್ರ, ಆಶಾ ನಾಯ್ಕ, ಗಜಾನನ ನಾಯ್ಕ , ನಿತ್ಯಾನಂದ ನಾಯ್ಕ, ಪವನ ನಾಯ್ಕ, ಉಮೇಶ್ ನಾಯ್ಕ ಮುಂತಾದವರು ಹಾಜರಿದ್ದರು.