ಕುಮಟಾ : 74 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕುಮಟಾ ತಾಲೂಕಿನ ಕಾಗಾಲದವರಾದ ಚಿದಾನಂದ ಭಂಡಾರಿ ಅವರು ಕೊಂಕಣಿ ಭಾಷೆಯಲ್ಲಿ ಬರೆದ ನಿವೇದನಾ ಎಂಬ ಗೀತೆಗೆ ಸಂಗೀತ ಅಳವಡಿಸಿ ಬಿಡುಗಡೆ ಮಾಡಲಾಯಿತು .


ನಿನ್ನೆ ತಡ ರಾತ್ರಿ ಹನ್ನೆರಡು ಗಂಟೆಗೆ ಯ್ಯೂಟ್ಯೂಬ್ ಮಾಧ್ಯಮದ ಮೂಲಕ ಸಾವಿರಾರು ಜನರನ್ನು ತಲುಪಿದ ಕೊಂಕಣಿ ದೇಶ ಭಕ್ತಿಗೀತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು
ಕೊಂಕಣಿ ಮಾತೃಭಾಷಿಕ ೪೨ ಹೆಚ್ಚು ಪಂಗಡಗಳು ಇದ್ದು ಅದರಲ್ಲಿ ಒಂದಾದ ದೇಶಭಂಡಾರಿ ಸಮುದಾಯದಿಂದ ಬಂದ ಚಿದಾನಂದ ಭಂಡಾರಿ ಇವರು ಕನ್ನಡ ಹಾಗೂ ಕೊಂಕಣಿ ಭಾಷೆಯ ಉದಯೋನ್ಮುಖ ಸಾಹಿತಿಗಳಾಗಿದ್ದಾರೆ.ಯಕ್ಷಗಾನ ನಾಟಕ ಭಾಷಣ ಮುಂತಾದ ಹವ್ಯಾಸಗಳನ್ನು ತೊಡಗಿಸಿಕೊಂಡಿರುವ ಇವರು ಕುಮಟಾದ ಕೊಂಕಣ ಶಿಕ್ಷಣ ಸಂಸ್ಥೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಹಾಲೀ ಸದಸ್ಯರಾದ ಇವರ ಕವಿತೆಗೆ ಖ್ಯಾತ ಹಿಂದೂಸ್ತಾನಿ ಗಾಯಕಿ ಡಾಕ್ಟರ್ ಸಂಪದಾ ಭಟ್ ಮರಬಳ್ಳಿ ಇವರು ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ.ರಂಜನ್ ಕುಮಾರ್ ಬೇಉರಾ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಈ ಗೀತೆಗೆ ದೃಶ್ಯ ಸಂಯೋಜನೆಯನ್ನು ಕೊಂಕಣದ ಶಿಕ್ಷಕ ರವಿ ಆಚಾರ್ಯ ಮಾಡಿದ್ದು. ಖ್ಯಾತ ಚಲನ ಚಿತ್ರನಟ ನಿರ್ಮಾಪಕ ರಂಗಕರ್ಮಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಸಲಹೆ ಸಹಕಾರ ನೀಡಿದ್ದಾರೆ.

RELATED ARTICLES  ಕಾರವಾರದಲ್ಲಿ ರೂಪಾಲಿಗೆ ನಮೋ ಎಂದ ಮತದಾರ: ಕಾರ್ಯಕರ್ತರಲ್ಲಿ ಸಂತಸ.