ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಂಗಸಂಸ್ಥೆಗಳಿಂದ 74ನೇ ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪೂರ್ಣ ಕಾರ್ಯಕ್ರಮದ ಲೈವ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಕೊರೋನಾ ಮಹಾಮಾರಿಯನ್ನು ತಡೆಯಲು ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ ಶಿವಪ್ಪ ಪಟಗಾರ (ಪೊಲೀಸ್), ಜಾನು ನಾಯ್ಕ (ಅಂಬುಲೆನ್ಸ್ ಡ್ರೈವರ್), ಶಶಿಕಲಾ ಎನ್ ಹೆಗಡೆ (ಅಂಗನವಾಡಿ ಶಿಕ್ಷಕಿ), ನೂತನ ಸಂದೀಪ ನಾಯಕ (ನರ್ಸ), ಲಕ್ಷ್ಮಿ ಜಯಂತ ಮುಕ್ರಿ (ಆಶಾ ಕಾರ್ಯಕರ್ತೆ), ಭಾರತಿ ನಾಯ್ಕ (ನರ್ಸ), ನಾಗರತ್ನಾ ನಾಯ್ಕ (ನರ್ಸ) ಶ್ರೀಮತಿ ಚಂದ್ರಕಲಾ ವಿಠಲ ಗೌಡ ( ಆಶಾ ಕಾರ್ಯಕರ್ತೆ) ಕವಿತಾ ನಾಗರಾಜ ನಾಯ್ಕ (ಆಶಾ ಕಾರ್ಯಕರ್ತೆ) ಶೀಲಾ ರವಿ ನಾಯ್ಕ (ನರ್ಸ) ಇವರನ್ನು ಸನ್ಮಾನಿಸಲಾಯಿತು.
ಈ ವರ್ಷದ ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ಗಳಿಸಿದ ಸಂಜಯ ದತ್ತಾ ನಾಯಕ, ಕಾರ್ತಿಕ ಎಸ್ ನಾಯ್ಕ, ಅಕ್ಷಯ ಅನಿಲ್ ನಾಯ್ಕ, ಪ್ರಜ್ಞಾ ಪ್ರಕಾಶ ಶಾನಭಾಗ, ಶ್ರವಣ ಮಾರುತಿ ಪೈ, ಶಾಲ್ಮಲಿ ಎಸ್ ಮಣಕಿಕರ್, ಶಿಲ್ಪಾ ಡಿ ಭಟ್ಟ, ಪ್ರಜ್ವಲ್ ಗೋಪಾಲ ಪಟಗಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಟ್ರಸ್ಟಿನ ಅಧ್ಯಕ್ಷರಾದ ವಿಠ್ಠಲ ನಾಯಕ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ಮಾತನಾಡಿ ಭಾರತ ಬದಲಾಗುತ್ತಿದೆ. ಹಿಂದೆಂದೂ ಸಿಗದ ಶಿಕ್ಷಣ ಈಗ ಸಿಗುತ್ತಿದೆ ಎಂಬ ಭರವಸೆ ಮೂಡಿದೆ.ಹೊಸ ಶಿಕ್ಷಣ ನೀತಿಗೆ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಎಲ್ಲರೂ ಸ್ಪಂದಿಸಬೇಕಿದೆ ಎಂದರು. ಆನ್ ಲೈನ್ ಮೂಲಕ ಇಂದಿನ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು ಶಾಲೆಗೆ ಬರುವಂತಾಗಲಿ. ಕೊರೋನಾ ಮಹಾಮಾರಿ ವಿಶ್ವದಿಂದ ತೊಲಗಲಿ ಎಂದರು.
ಟ್ರಸ್ಟಿಗಳಾದ ರಮೇಶ ಪ್ರಭು, ಜಂಟೀ ಕಾರ್ಯದರ್ಶಿ ಶೇಷಗಿರಿ ಶಾನಭಾಗ ರಾಮನಾಥ ಕಿಣಿ, ಎಲ್ಲಾ ಅಂಗಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳ ಪಾಲಕರು, ಶಾಲಾ ವಾಹನ ಚಾಲಕ-ನಿರ್ವಾಹಕರು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.