ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಫೀಸಲಲ್ಲಿ ಹಮ್ಮಿಕೊಳ್ಳಲಾಯಿತು ಅದರ ಜೋತೆಗೆ ಲಯನ್ಸ್ ಕ್ಲಬ್ ಕುಮಟದ ವತಿಯಿಂದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಕಾರ್ಯ ಕ್ರಮದ ಅಧ್ಯಕ್ಷ ತೆ ವಹಿಸಿದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟದ ಅಧ್ಯಕ್ಷರೂ,ಖ್ಯಾತ ವೈದ್ಯರು ಆದ ಡಾ.ಅಶೋಕ್ ಭಟ್ ರವರು ೭೪ನೇ ದ್ವಜಾರೋಹಣ ಕಾರ್ಯಕ್ರಮ ನೆರವೆರಿಸಿಕೊಟ್ಟರು. ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ವಿನಯಾ ಹೆಗಡೆಯವರು ಕೋವಿಡ್ ಸಮಯದಲ್ಲಿ ಸೇವೆಗೆ ಮೆಚ್ಚುಗೆ ವ್ಯಕ ಪಡಿಸಿದರು.
ಹಾಗೆಯೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ವಿನಯಾ ಹೆಗಡೆ,ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಗಳಾದ ಶ್ರೀ ಎಸ್. ಎಸ್ ಹೆಗಡೆಯವರು,ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟದ ಮಾಜಿ ಅಧ್ಯಕ್ಷ ರು,ಖ್ಯಾತ ಸ್ತ್ರೀರೋಗ ತಜ್ಞರು ಆದ ಡಾ ಜಿ.ಜಿ.ಹೆಗಡೆ,ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟದ ಕೋಶಾಧಿಕಾರಿಯೂ ಮತ್ತು ಲಯನ್ಸ್ ಕ್ಲಬ್ ನ ಸದಸ್ಯರಾದ ಶ್ರೀ ಬೀರಣ್ಣ ನಾಯಕರವರು ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಸಿಬ್ಬಂದಿಗೆ ಸನ್ಮಾನ ಮಾಡಿದರು.
ಈ ಕಾರ್ಯ ಕ್ರಮದ ಅಧ್ಯಕ್ಷ ತೆ ವಹಿಸಿದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟಾದ ಅಧ್ಯಕ್ಷರೂ,ಖ್ಯಾತ ವೈದ್ಯರು ಆದ ಡಾ.ಅಶೋಕ್ ಭಟ್ ರವರು ಅಧ್ಯಕ್ಷೀಯ ಮಾತನಾಡಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕುಮಟದ ಕಾರ್ಯಕ್ರಮಾಧೀಕಾರಿ ಮಿಸ್. ಮಂಜುಳಾ ಗೌಡರವರು ಸ್ವಾಗತಿಸಿ-ವಂದಿಸಿದರು. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸದಸ್ಯರಾದ ಶ್ರೀ ಎಸ್ ಎಮ್ ಭಂಡಾರಿ, ಶ್ರೀ ಆರ್.ಜಿ ಹೆಗಡೆಯವರು ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ನಿವೃತ್ತ ಮ್ಯಾನೇಜರ್ ಶ್ರೀ. ಎಮ್. ಎನ್ ಹೆಗಡೆ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಮ್ಯಾನೇಜರ್ ಶ್ರೀಮತಿ ಸಂತಾನ್ ಲೂಯಿಸ್,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.