ಸಾಮಾನ್ಯವಾಗಿ ಬಿಳಿ ಅಕ್ಕಿಯಿಂದ ಊಟ ಮಾಡುವುದು ರೂಢಿಯಲ್ಲಿದೆ. ಆದರೆ ಕೆಂಪು ಅಕ್ಕಿ ಊಟ ಮಾಡಿದರೇ ಅದು ದೇಹಕ್ಕೆ ಹೆಚ್ಚು ಪ್ರಯೋಜನವಾಗಲಿದೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.ಇದರಿಂದ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕರಗಿಸಿ ದೇಹದ ತೂಕವು ಇಳಿಯುತ್ತದೆ. ಕೆಂಪು ಅಕ್ಕಿ ತಿನ್ನುವುದು 30 ನಿಮಿಷ ವೇಗವಾಗಿ ನಡೆಯುವುದಕ್ಕೆ ಸಮ. ಒಂದು ದಿನಕ್ಕೆ 100 ಕ್ಯಾಲಿಯನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಮ್ಯಾಸಚೂಸೆಟ್ಸ್ ನ ತುಫ್ಟ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರು ಇದಕ್ಕಾಗಿ ಎರಡು ಗುಂಪಿನ ಜನರು ಬಳಸಿಕೊಂಡಿದ್ದಾರೆ. ಇದರಲ್ಲಿ ಒಂದು ಗುಂಪಿಗೆ ಹಣ್ಣು, ತರಕಾರಿಯಂತ ಶಕ್ತಿಯುತವಾದ ಆಹಾರವನ್ನು ನೀಡಲಾಯಿತು. ಮತ್ತೊಂದು ಗುಂಪಿಗೆ ಕೆಂಪು ಅಕ್ಕಿಯಿಂದ ಮಾಡಿದ ಆಹಾರವನ್ನು ನೀಡಲಾಯಿತು. ಇದರಲ್ಲಿ ಧಾನ್ಯಗಳನ್ನು ಸೇವಿಸಿದ ಗುಂಪಿನವರು ವೇಗವಾಗಿ ಚಯಾಪಚಯಗೊಂಡಿದ್ದರು. ಅವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಂಬಿನ ಅಂಶ ಕರಗಿತ್ತು. ಜತೆ ಅವರ ದೇಹದಲ್ಲಿನ ಪ್ರತಿರೋಧಕ ಶಕ್ತಿ ಸಹ ವೃದ್ಧಿಯಾಗಿತ್ತು.
ಈ ಸಂಶೋಧನೆಗಾಗಿ ಸಂಶೋಧಕರು 81 ಮಂದಿಯನ್ನು ಬಳಸಿಕೊಳ್ಳಲಾಗಿತ್ತು. 40 ವರ್ಷ ದಿಂದ 65 ವರ್ಷದ ಮಹಿಳೆಯರನ್ನು ಇದಕ್ಕೆ ಬಳಸಿಕೊಳ್ಳಲಾಗಿತ್ತು. ಈ ಅಧ್ಯಾಯನದ ಮೂಲಕ ತಿಳಿದುಬಂದ ಅಂಶ ಎಂದರೇ ಕೆಂಪು ಅಕ್ಕಿ ಊಟ ಇತರ ಹಣ್ಣ ತರಕಾರಿಗಿಂತ ಹೆಚ್ಚು ಪರಿಣಾಮಕಾರಿ ಎಂದು.
RELATED ARTICLES  ಏಕಾಏಕಿ ಹೊತ್ತಿ ಉರಿದ ಓಮಿನಿ : ಕೆಲ ಕಾಲ ಬಿಗುವಿನ ಪರಿಸ್ಥಿತಿ.