ಕುಮಟಾ : ತಾಲೂಕಿನ ಮೂರೂರು ಕೋಣಾರೆಯ ವಿಷ್ಣು ಮೂರ್ತಿ ದೇವಸ್ಥಾನ ದಲ್ಲಿ ಶನಿವಾರ ತಡರಾತ್ರಿ ಕಳುವಿನ ಪ್ರಕರಣ ನಡೆದಿದೆ.
ಖಧೀಮರು ಬಾಗಿಲ ಬೀಗ ಮುರಿದು ದೇವರ ಕವಚ ಸೇರಿ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದೊಯ್ದ ಬಗ್ಗೆ ಊರವರು ಮಾಹಿತಿ ನೀಡಿದ್ದಾರೆ.
ಕಳ್ಳರು ಕಳ್ಳತನ ನಡೆಸುವ ಸಂದರ್ಭದಲ್ಲಿ ಸದ್ದಿಗೆ ಎಚ್ಚರವಾದ ಅರ್ಚಕರು ಕಳ್ಳರನ್ನು ಕಂಡು ಕೂಗಿಕೊಂಡಿದ್ದು, ಕಳ್ಳರು ಸಿಕ್ಕಷ್ಟು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮಾಹಿತಿ ಪಡೆದ ಪೊಲೀಸರು ರಾತ್ರಿಯೇ ಸ್ಥಳಕ್ಕೆ ಬಂದು ಕಳ್ಳರ ಜಾಡು ಹಿಡಿಯುವ ಪ್ರಯತ್ನ ಮಾಡಿದ್ದಾರೆ.
ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.ಈ ಕಳ್ಳತನ ಪ್ರಕರಣ ಇದೀಗ ಊರಿನ ಜನರಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಕಳ್ಳರನ್ನು ಹೆಡೆಮುರಿ ಕಟ್ಟುವ ಪ್ರಯತ್ನ ಮುಂದಿವರಿಸಿದ್ದಾರೆ.