ಕುಮಟಾ : ತಾಲೂಕಿನ ವನ್ನಳ್ಳಿಯ ನಿವಾಸಿಯಾಗಿರುವ ಸಂಜಯ ದತ್ತಾ ನಾಯ್ಕ ಇವರು ಕೊಂಕಣ ಎಜುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಪ್ರೌಢಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿ ಈ ವರ್ಷದ ಎ.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನಗಳಿಸುವ ಮೂಲಕ ಕುಮಟಾ ಹೆಸರನ್ನು ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುತ್ತಾರೆ. ಇವರ ಸಾಧನೆ ನಿಜಕ್ಕೂ ಪ್ರಶಂಸನೀಯವಾದದ್ದು. ಇಂದು ಈ ವಿದ್ಯಾರ್ಥಿಯ ಸ್ವಗೃಹಕ್ಕೆ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೇಟಿಯಾಗಿ, ವಿದ್ಯಾರ್ಥಿಯನ್ನು ಸನ್ಮಾನಿಸಿ, ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಪ್ರೋತ್ಸಾಹ ಧನ ವಿತರಿಸಿದರು . ಅಲ್ಲದೆ ಅವರು ಮುಂದೆಯೂ ಕೂಡ ಇದೇ ರೀತಿ ಸಾಧನೆಯೊಂದಿಗೆ ಕುಮಟಾ ಹೆಸರನ್ನು ಬೆಳಗುತ್ತಿರಲಿ ಎಂದು ಶುಭ ಹಾರೈಸಿದರು….

RELATED ARTICLES  ಹೆದ್ದಾರಿಯಲ್ಲಿ ಸೀಬರ್ಡ ಬಸ್ ಪಲ್ಟಿ.


ಈ ಸಂದರ್ಭದಲ್ಲಿ ಮೋಹನ್ ಕೆ.ಶೆಟ್ಟಿ ಟ್ರಸ್ಟಿನ ಉಪಾಧ್ಯಕ್ಷರಾದ ರವಿಕುಮಾರ್ ಎಂ.ಶೆಟ್ಟಿ, ಮುಖಂಡರಾದ ವಿ.ಎಲ್.ನಾಯ್ಕ, ಎಂ‌ಟಿ.ನಾಯ್ಕ, ಮುಜಾಫರ್ ಸಾಬ್, ಜಗದೀಶ್ ಹರಿಕಂತ್ರ, ಆಶಾ ನಾಯ್ಕ, ಜೈನಾಬಿ ಶ್ಯಾಮಲಿ, ನಿತ್ಯಾನಂದ ನಾಯ್ಕ, ಗಿರೀಶ್ ನಾಯ್ಕ ಮುಂತಾದವರು ಹಾಜರಿದ್ದರು…

RELATED ARTICLES  ದಿನಾಂಕ 22/05/2019ರ ದಿನ ಭವಿಷ್ಯ ಇಲ್ಲಿದೆ.