ಕಾರವಾರ: ಕಾರವಾರದಲ್ಲಿ 31, ಅಂಕೋಲಾ 1, ಕುಮಟಾ 5, ಹೊನ್ನಾವರ 7, ಭಟ್ಕಳ 8, ಶಿರಸಿ 3, ಯಲ್ಲಾಪುರ 3, ಮುಂಡಗೋಡ 4, ಹಳಿಯಾಳದಲ್ಲಿ ಐವರಲ್ಲಿ ಸೇರಿ ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ 59 ಜನರಲ್ಲಿ ಸೋಂಕು ದೃಢಪಟ್ಟಿದೆ.
ಇಂದು ಕೊರೋನಾ ಗೆದ್ದವರ ಸಂಖ್ಯೆಯೇ ಹೆಚ್ಚಿದ್ದು 110 ಮಂದಿ ಗುಣಮುಖರಾಗಿದ್ದಾರೆ. ಕಾರವಾರದಲ್ಲಿ 11, ಮುಂಡಗೋಡಿನಲ್ಲಿ 37, ಹಳಿಯಾಳದಲ್ಲಿ 46, ಜೋಯ್ಡಾದಲ್ಲಿ 10 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಉ.ಕ ದಲ್ಲಿ ಸೋಂಕಿತರ ಸಂಖ್ಯೆ 3279ಕ್ಕೆ ಏರಿಕೆಯಾಗಿದೆ. 177 ಮಂದಿಗೆ ಹೋಮ್ ಐಷೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.