ಕುಮಟಾ; ಪ್ರಾಥಮಿಕ ಶಾಲೆಯಿಂದ ಹೈಸ್ಕೂಲಿನ ವರೆಗೂ ಕನ್ನಡ ಮಾಧ್ಯಮದಲ್ಲಿ ಓದಿ ಎಸೆಸೆಲ್ಸಿ ಯಲ್ಲಿ 625 ಅಂಕ 613 ಅಂಕ ಪಡೆದು ತಾಲೂಕಿಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಹೆಗಡೆಯ ವಿದ್ಯಾರ್ಥಿನಿ ಕುಮಾರಿ ರಕ್ಷಾ ದತ್ತಾತ್ರೇಯ ಭಟ್ಟ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಅವರ ಮನೆಯಲ್ಲಿ ಭೇಟಿಯಾಗಿ ಕನ್ನಡ ಶಾಲು ಹೊದಿಸಿ ಕನ್ನಡ ಬಾವುಟ ನೀಡಿ ಗೌರವ ಸಮರ್ಪಣೆ ಮಾಡಿತು.
ಸ್ಮರಣಿಕೆ ನೀಡಿ ಗೌರವಿಸಿದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಕನ್ನಡ ನೆಲದ ಕಂಪು ನಾಗರಿಕ ಸೇವೆ ಪರೀಕ್ಷೆಗಳಲ್ಲಿ ಕನ್ನಡ ಸಾಹಿತ್ಯದ ಕುರಿತು ಹಲವಾರು ಪ್ರಶ್ನೆಗಳು ಬರುತ್ತವೆ ವಿದ್ಯಾರ್ಥಿಗಳು ಬಾಲ್ಯದಿಂದಲೇ ಕನ್ನಡ ಸಾಹಿತ್ಯವನ್ನು ಓದುವ ಪರಿಪಾಠ ಬೆಳೆಸಿಕೊಳ್ಳಬೇಕು ಪಠ್ಯ ವಸ್ತು ಮುಖ್ಯ ವಿಷಯವಾದರೂ ಸಾಹಿತ್ಯದ ಓದು ಹವ್ಯಾಸ ವಾಗಬೇಕು ಎಂದು ಅಭಿಪ್ರಾಯಪಟ್ಟರು.

RELATED ARTICLES  ರಾಮ ಭಕ್ತ ಹನುಮ ಜಯಂತಿ : ಚಂದಾವರಸೀಮೆ ಹನುಮನಿಗೆ ಸಂದಿತು ವಿಶೇಷ ಪೂಜೆ


ಕುಮಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಶ್ರೀಧರ್ ಗೌಡ ಉಪ್ಪಿನ ಗಣಪತಿ ಅವರು ಇಂದು ಕೆಎಎಸ್ ಸೇರಿದಂತೆ ಐ ಎ ಎಸ್ ಪರೀಕ್ಷೆಗಳು ಕೂಡ ಕನ್ನಡ ಮಾಧ್ಯಮದಲ್ಲೇ ಬರೆಯಬಹುದು ಮಾತೃಭಾಷೆಗಳು ನಮ್ಮ ಸೃಜನಶೀಲತೆಗೆ ಸರಳ ಹಾಗೂ ಸುಲಭವಾದ ಮಾಧ್ಯಮವಾಗಿದೆ ಎಂದರು.


ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಅಧ್ಯಾಪಕರಾದ ಮಂಗಲ ಹೆಬ್ಬಾರ್ ಮಾತನಾಡಿ ರಕ್ಷಾ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ತಮ್ಮ ಶಾಲೆಯಲ್ಲಿ ವಿದ್ಯಾರ್ಥಿನಿಯಾಗಿದ್ದು ಈಗ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ನಮ್ಮ ಶಾಲೆಗೆ ನಮ್ಮ ಶಿಕ್ಷಕರಿಗೆ ಹಾಗೂ ನಮ್ಮ ಊರಿಗೆ ಕೀರ್ತಿ ತಂದಿದ್ದಾರೆ ಎಂದು ಅಭಿನಂದಿಸಿದರು.


ಗೌರವ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ರಕ್ಷಾ
ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ಗೌರವಿಸಿದ್ದು ನನಗೆ ತುಂಬಾ ಖುಷಿ ನೀಡಿದೆ ಈ ಹಿಂದೆ ನಮ್ಮ ಶಾಲೆಯ ಬಯಲಿನಲ್ಲಿ ಕುಮಟಾ ತಾಲೂಕು ಸಾಹಿತ್ಯ ಸಮ್ಮೇಳನ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆದ ನೆನಪು ನನ್ನ ಸ್ಮೃತಿಪಟಲದಲ್ಲಿ ಉಳಿದಿದೆ ಮುಂದೆ ನಾನು ವಿಜ್ಞಾನದ ವಿದ್ಯಾರ್ಥಿ ಆಗಬೇಕೆಂದು ಬಯಸಿದ್ದರು ಕನ್ನಡ ಸಾಹಿತ್ಯದ ಓದು ನನ್ನ ಓದಿನ ಒಂದು ಭಾಗವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ, ದೊರೆಯುತ್ತದೆ: ನಾಗರಾಜ ನಾಯಕ ತೊರ್ಕೆ

ಕುಮಟಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮಂಜುನಾಥ್ ನಾಯ್ಕ್ ಕಾರ್ಯಕ್ರಮ ರೂಪಿಸಿ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಸಾಹಿತಿ ಉದಯ ಮಡಿವಾಳ, ಯೋಗೇಶ್ ಪಟಗಾರ್, ಶಿಕ್ಷಣ ಇಲಾಖೆಯ ಬಿ ಆರ್ ಪಿ ಚೂಡಾಮಣಿ ಪಟಗಾರ, ಸಿ ಆರ್ ಪಿ ನರಹರಿ ಭಟ್ಟ ಶಾಲೆಯ ಶಿಕ್ಷಕರಾದ ಶ್ಯಾಮಲಾ ಪಟಗಾರ, ರೇಣುಕಾ ನಾಯ್ಕ್, ನಯನ ಪಟಗಾರ ವಿದ್ಯಾರ್ಥಿನಿಗೆ ಶುಭಕೋರಿದರು.