ಕುಮಟಾ : ತಾಲೂಕಿನ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗ (ಸ್ನಾತಕ -ಸ್ನಾತಕೋತ್ತರ) ಇದರ ಅಡಿಯಲ್ಲಿ ರಸಾಯನಶಾಸ್ತ್ರ ರಾಷ್ಠ್ರೀಯ ವೆಬಿನಾರ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾಲೇಜಿನ ರಸಾಯನಶಾಸ್ತ್ರ ವಿಭಾಗವು “ಇಂಪೊರ್ಟನ್ಸ ಕೆಟೆಲಿಸಿಸ್ ಆ್ಯಂಡ್ ಒರ್ಗೆನಿಕ್ ಸಿಂಥೆಸಿಸ್: ಪ್ರಸೆಂಟ್ ಟು ಫ್ಯೂಚರ್” ಎಂಬ ವಿಷಯದ ಮೇಲೆ ರಾಷ್ಠ್ರೀಯ ಮಟ್ಟದ ಆನ್ಲೈನ್ ಕಾರ್ಯಗಾರ ನಡೆಸಿತು.

ಕಾರ್ಯಾಗಾರದ ಕೋ-ಆರ್ಡಿನೇಟರ್ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಎನ್. ಕೆ. ನಾಯಕರವರು ಅತಿಥಿಗಳನ್ನು ಸ್ವಾಗತಿಸಿ, ಮೊದಲನೇ ಹಂತದ ಸಂಪನ್ಮೂಲ ವ್ಯೆಕ್ತಿಯನ್ನು ಪರಿಚಯಿಸಿದರು. ಮೊದಲ ಭಾಗದ ಸಂಪನ್ಮೂಲ ವ್ಯಕ್ತಿಯಾದ ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನಾ ಕೇಂದ್ರದ ಮಟೀರಿಯಲ್ ಸಾಯನ್ಸ ಹಾಗೂ ಕೆಟೆಲಿಸಿಸ್ ವಿಭಾಗದ ಮುಖ್ಯಸ್ಥರಾದ ಡಾ. ಗಣಪತಿ ವಿ. ಶ್ಯಾನಭಾಗರವರು ”ಹೆಟರೊಜಿನಿಯಸ್ ಕೆಟೆಲಿಸಿಸ್” ವಿಷಯವನ್ನು ಸಾದರಪಡಿಸಿರು.

RELATED ARTICLES  ಪೆಟ್ರೋಲ್ ಬಂಕ್ ನಲ್ಲಿ ಎರಡು ಬೈಕ್ ಗೆ ಗುದ್ದಿದ ಕಾರು.

ಎರಡನೇಯ ಭಾಗದ ಸಂಪನ್ಮೂಲ ವ್ಯೆಕ್ತಿಯಾದ ಪುಣಾದ ಇಂಡಿಯನ್ ಇಸ್ಟಿಟ್ಯೂಟ್, ಎಜ್ಯುಕೇಶನ್ ಆ್ಯಂಡ್ ರೀಸರ್ಚನ ವಿಭಾಗದ ಮುಖ್ಯಸ್ಥರಾದ ಡಾ. ರಾಮಕೃಷ್ಣ ಭಟ್ ರವರನ್ನು ಕನ್ವೇನರ್ ಡಾ. ರೇವತಿ ನಾಯ್ಕ ಪರಿಚಯಿಸಿದರು.

RELATED ARTICLES  ಏಡಿ ಹಿಡಿಯಲು ಹೋಗಿದ್ದ ಯುವಕ ಸಾವು.

ಡಾ. ಭಟ್ ರವರು “ಆರ್ಗನಿಕ್ ಸಿಂಥೇಸಿಸ್ ಆ್ಯಂಡ್ ಇಟ್ಸ ಆಪ್ಲಿಕೇಶನ್ಸ” ವಿಷಯವನ್ನು ಮಂಡಿಸಿದರು. ಈ ವಿಜ್ಞಾನಿಗಳ ವಿಷಯದ ಮಂಡನೆಯ ನಂತರ ವೆಬಿನಾರನಲ್ಲಿ ಭಾಗವಹಿಸಿದವರು ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದುಕೊಂಡರು. ಈ ವೆಬಿನಾರನಲ್ಲಿ 126 ಅಭ್ಯರ್ಥಿಗಳು ಬೇರೆ ಬೇರೆ ರಾಜ್ಯಗಳಿಂದ ಭಾಗವಹಿಸಿ, ವೆಬಿನಾರ್‍ನ ವರ್ಚಸ್ಸು ಹೆಚ್ಚಿಸಿದರು. ಸ್ನೇಹಾ ಹೆಗಡೆ ವಂದಿಸಿದರು.