ಕಾರವಾರ: ಕಾರವಾರದಲ್ಲಿ 21, ಅಂಕೋಲಾ 1, ಕುಮಟಾ 8, ಹೊನ್ನಾವರ 9, ಭಟ್ಕಳ 5, ಶಿರಸಿ 2, ಮುಂಡಗೋಡ 9, ಹಳಿಯಾಳದಲ್ಲಿ 34 ಜನರಲ್ಲಿ ಇಂದು ಕೊರೋನಾ ಪಾಸಿಟೀವ್ ಕಾಣಿಸಿಕೊಂಡಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ 89 ಜನರಲ್ಲಿ ಸೋಂಕು ದೃಢಪಟ್ಟಿದೆ.
ಉತ್ತರ ಕನ್ನಡದ ವಿವಿಧ ಆಸ್ಪತ್ರೆಯಿಂದ ಇಂದು 39 ಜನರು ಕೊರೋನಾ ಗೆದ್ದು ಡಿಶ್ಚಾರ್ಜ ಆಗಿದ್ದಾರೆ.
720 ಜನರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
195 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ
ಇಂದು ಕರೋನಾ ದಿಂದ ಒಂದು ಸಾವು ಸಂಭವಿಸಿದೆ.ಈ ಮೂಲಕ ಸಾವಿನ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ.
ಕುಮಟಾ ತಾಲೂಕಿನ ಗೋಕರ್ಣ, ಗುಂದ, ಹೆಗಡೆ ಭಾಗದಲ್ಲಿ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಗೋಕರ್ಣದ 63 ವರ್ಷದ ಪುರುಷ, ಗೋಕರ್ಣದ 45 ವರ್ಷದ ಮಹಿಳೆ, ಕುಮಟಾದ 25 ವರ್ಷದ ಯುವಕ, ಗುಂದಾದ 32 ವರ್ಷದ ಪುರುಷ, ಗುಂದಾದ 36 ವರ್ಷದ ಪುರುಷ, ಹೆಗಡೆಯ 17 ವರ್ಷದ ಯುವಕ, ಹೆಗಡೆಯ 45 ವರ್ಷದ ಮಹಿಳೆ, ಹೆಗಡೆಯ 65 ವರ್ಷದ ಮಹಿಳೆಗೆ ಪಸಿಟೀವ್ ಬಂದಿದೆ.
ಹೊನ್ನಾವರ ತಾಲೂಕಿನಲ್ಲಿ ರಾಯಲಕೇರಿ ಅಂಬೇಡ್ಕರ್ ನಗರದ 58 ವರ್ಷದ ಪುರುಷ, 52 ವರ್ಷದ ಮಹಿಳೆ, 23 ವರ್ಷದ ಯುವತಿ, 32 ವರ್ಷದ ಮಹಿಳೆ, ಉದ್ಯಮ ನಗರದ 31 ವರ್ಷದ ಯುವಕ, ಹಳದಿಪುರದ 57 ವರ್ಷದ ಪುರುಷ, ಕಾಸರಕೋಡ ಮಲಬಾರ ಕೇರಿಯ 34 ವರ್ಷದ ಯುವಕ, ಸುರಕಟ್ಟ ತಮ್ಮಡಗಿಯ 29 ವರ್ಷದ ಯುವಕ, ಮೋಳ್ಕೋಡನ 47 ವರ್ಷದ ಪುರುಷ, 48 ವರ್ಷದ ಮಹಿಳೆಗೆ ಕೊರೋನಾ ಪಾಸಿಟೀವ್ ಬಂದಿದ ಬಗ್ಗೆ ವರದಿಯಾಗಿದೆ.