ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 80 ಕರೋನಾ ಪಾಸಿಟಿವ್ ವರದಿಯಾಗಿದೆ.
ಕಾರವಾರದಲ್ಲಿ 5, ಅಂಕೋಲಾ 1, ಕುಮಟಾದಲ್ಲಿ 16, ಭಟ್ಕಳದಲ್ಲಿ 5, ಶಿರಸಿಯಲ್ಲಿ 9, ಸಿದ್ದಾಪುರದಲ್ಲಿ 15, ಮುಂಡಗೋಡದಲ್ಲಿ 7, ಹಳಿಯಾಳದಲ್ಲಿ 21, ಜೊಯಿಡಾದಲ್ಲಿ ಓರ್ವನಲ್ಲಿಮಂದಿಯಲ್ಲ ಸೋಂಕು ದೃಢಪಟ್ಟಿದೆ.
113 ಜನ ಇಂದು ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ. ಕಾರವಾರದಲ್ಲಿ 17, ಅಂಕೋಲಾದಲ್ಲಿ 5, ಕುಮಟಾದಲ್ಲಿ 4, ಹೊನ್ನಾವರ 14, ಭಟ್ಕಳ 15, ಶಿರಸಿ 4, ಸಿದ್ದಾಪುರ ಓರ್ವ, ಯಲ್ಲಾಪುರ ಎಂಟು, ಮುಂಡಗೋಡ ಇಬ್ಬರು, ಹಳಿಯಾಳದಲ್ಲಿ 43, ಜೊಯಿಡಾದಲ್ಲಿ ಓರ್ವ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈ ಮೂಲಕ 2534ಕ್ಕೆ ಏರಿಕೆಯಾದ ಗುಣಮುಖರಾದವರ ಸಂಖ್ಯೆಯಾಗಿದ್ದು
681 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 200 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಅಂಕೋಲಾ ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ ಮೃತರಾದ 78ರ ವೃದ್ಧರೋರ್ವರಲ್ಲಿ ಕೋವಿಡ್ ಪಾಸಿಟಿವ್ ಲಕ್ಷಣಗಳು ಕಂಡುಬoದಿದೆ ಎಂದು ಹೇಳಲಾಗಿದ್ದು, ವಯೋ ಸಹಜ ಕಾಯಿಲೆ ಅಥವಾ ಇತರೆ ಕಾರಣಗಳಿಂದ ಕಳೆದ 4-5 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಇವರಿಗೆ ಯಾವುದೇ ಹೊರಗಿನ ಟ್ರಾವೆಲ್ ಹಿಸ್ಟರಿ ಇರದೇ ಮನೆಯಲ್ಲಿಯೇ ಇದ್ದು, ತದ ನಂತರ ಆಸ್ಪತ್ರೆಗೆ ದಾಖಲಾದ ಇವರಿಗೆ ಮರಣೋತ್ತರ ಪರೀಕ್ಷೆ ವೇಳೆ ಪಾಸಿಟಿವ್ ಕಾಣಿಸಿಕೊಂಡಿರುವುದು ಅಚ್ಚರಿ ಎನಿಸಿದೆ.