ಕೊಂಕಣಿ ಭಾಷೆಗೆ ಸಂವಿಧಾನಬದ್ಧ ಮಾನ್ಯತೆ ದೊರೆತ ದಿನವಾದ ಅಗಷ್ಟ ೨೦ ರಂದು ಗುರುವಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕುಮಟಾದ ಕೊಂಕಣಿ ಪರಿಷದ್ ರವರು ಸಂಯುಕ್ತವಾಗಿ ಕೊಂಕಣಿ ಮಾನ್ಯತಾ ದಿವಸವನ್ನು ಆಚರಿಸಲಿದ್ದು ಕುಮಟಾದ ನಾದಶ್ರೀಕಲಾ ಕೇಂದ್ರದ ಸಭಾಭವನದಲ್ಲಿ ಮುಂಜಾನೆ ಹನ್ನೊಂದು ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಯವರು ಉದ್ಘಾಟಿಸಲಿದ್ದಾರೆ.
ನೂತನವಾಗಿ ವಿಧಾನಪರಿಷತ್ತಿಗೆ ನೇಮಕವಾಗಿರುವ ಶಾಸಕ ಶ್ರೀ ಶಾಂತಾರಾಮ ಸಿದ್ಧಿಯವರು ,ಹನ್ಮಾವ ಚರ್ಚನ ಧರ್ಮಗುರು ಜೋನ್ ರೊಡ್ರಗೀಸ್ ರೋಟರಿ ಕ್ಲಬ್ ಕುಮಟಾದ ಅಧ್ಯಕ್ಷ ಶ್ರೀ ಶಶಿಕಾಂತ ಕೋಳೇಕರ ಸಮಾಜಸೇವಕ ಶ್ರೀ ಎಂ ಬಿ ಪೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಕೋವಿಡ್ ನಿಯಮಾನುಸಾರ ಸರಳವಾಗಿ ಆಚರಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣಿ ಪರಿಷದ್ ಕುಮಟಾ ಇದರ ಅಧ್ಯಕ್ಷ ಶ್ರೀಅರುಣ ಉಭಯ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಕೊಂಕಣಿ ಸಮುದಾಯದ ಪರವಾಗಿ ವಿಧಾನಪರಿಷತ್ ಸದಸ್ಯ ಶ್ರೀ ಶಾಂತಾರಾಮ ಸಿದ್ಧಿಯವರನ್ನು ಸನ್ಮಾನಿಸಲಾಗುವುದು ಎಂದು ಅಕಾಡೆಮಿ ಸದಸ್ಯ ಚಿದಾನಂದ ಭಂಡಾರಿ ಇವರು ಪತ್ರಿಕೆಗೆ ತಿಳಿಸಿದ್ದಾರೆ.