ಬುಡಕಟ್ಟು ಜನಾಂಗದವನಾದ ತಾನು ಹಿರಿಯ ಸ್ವಯಂ ಸೇವಕರಾದ ದಿವಂಗತ ಪ್ರಕಾಶ ಕಾಮತರಿಂದ ಪ್ರೇರಣೆ ಪಡೆದೆ ಪದವಿಯ ವರೆಗೆ ವಿದ್ಯಾಭ್ಯಾಸ ಮಾಡಿದರೂ ನೌಕರಿಯ ಆಸೆ ಬಿಟ್ಟು ಸಮಾಜ ಸೇವೆಗಿಳಿದೆ ನನ್ನ ಪ್ರಾಮಾಣಿಕ ಸೇವೆಗೆ ಹಿಂದೆ ಕರ್ನಾಟಕ ಸರಕಾರ ಎರಡು ಬಾರಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯತ್ವವನ್ನು ನೀಡಿ ಗೌರವಿಸಿತ್ತು.ಆಗ ನಾನು ನಮ್ಮ ಜನಾಂಗದ ಅನೇಕ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಬೆಳಕಿಗೆ ತಂದೆ.ಇಂದಿಗೂ ಗುಡ್ಡ ಗಾಡು ಜನಾಂಗದವರು ಬಹಳ ಕಷ್ಟ ಪಡುತಿದ್ದಾರೆ .ಅವರ ಅಭ್ಯದಯಕ್ಕೆ ಶ್ರಮಿಸಬೇಕಾಗಿದೆ.ಕೊಂಕಣಿ ಮಾತೃ ಭಾಷೆಯು ಸುಂದರ ಭಾಷೆಯಾಗಿದ್ದು ಈ ಭಾಷೆಯನ್ನು ಪ್ರಾಥಮಿಕ ಹಂತದಿಂದಲೇ ಪಠ್ಯವಾಗಿ ಬೋಧಿಸುವ ಸಾಧ್ಯತೆಗಳಕುರಿತು ಸರಕಾರದ ಗಮನ ಸೆಳೆಯುವೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಪರಿಷದ್ ಕುಮಟಾ ಇವರು ಸಂಯುಕ್ತ ವಾಗಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಂಕಣಿ ಭಾಷಿಕ ವಿವಿದ ಸಮುದಾಯಗಳ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಚಿದಾನಂದ ಭಂಡಾರಿ ಸ್ವಾಗತಿಸಿ ಪರಿಚಯಿಸಿದರು.ಹನ್ಮಾವ್ ಚರ್ಚನ ಧರ್ಮಗುರು ಫಾದರ್ ಜೋನ್ ರೊಡ್ರಗೀಸ್, ಎಂ ಬಿ ಪೈ ಕುಮಟಾ ಜೈವಿಠಲ್ ಕುಬಾಲ ಅತಿಥಿಗಳಾಗಿ ಆಗಮಿಸಿದ್ದರು.ಪರಿಷದ್ ಅಧ್ಯಕ್ಷ ಅರುಣ ಉಭಯಕರ್ ಅಧ್ಯಕ್ಷತೆ ವಹಿಸಿದ್ದರು ಪರಿಷದ್ ಉಪಾಧ್ಯಕ್ಷ ಮುರಳೀಧರ ಪ್ರಭು ಪ್ರಾಸ್ತಾವಿಕ ನುಡಿಗಳನ್ಬಾಡಿದರು. ಪ್ರೋ ಆನಂದ ನಾಯಕ ವಂದಿಸಿದರು.ಈ ಕಾರ್ಯಕ್ರಮದಲ್ಲಿ ಕೊಂಕಣಿ ಕವಯಿತ್ರಿ ವನಿತಾ ನಾಯ್ಕ ಕವನವಾಚನ ಗೈದರು. ಕುಮಾರ್ ಓಂಕಾರ ಭಟ್ ಪ್ರಾರ್ಥಿಸಿದರು ನಿರ್ಮಲಾ ಪ್ರಭು ನಿರೂಪಿಸಿದರು.
ಕಾರ್ಯಕ್ರಮದ ವಿಶೇಷ ಎನ್ನುವಂತೆ ಶಾಸಕ ಸಿದ್ಧಿ ಅವರಿಗೆ ಕೊಂಕಣಿಯ ವಿವಿಧ ಸಮಾಜದ ಪ್ರಮುಖರು ಮಾಲಾರ್ಪಣೆಗೈದು ಸನ್ಮಾನಿಸಿದರು.ಬಿಜೆಪಿ ಹಿರಿಯ ಧುರೀಣರಾದ ವಿನೋದಪ್ರಭು,ಎಸ್ ಜಿ ನಾಯ್ಕ,ಪ್ರೀತಿ ಭಂಡಾರಕರ ಪುರಸಭಾ ಸದಸ್ಯರಾದ ಪಲ್ಲವಿಮಡಿವಾಳ,ಅನಿಲ್ ಹರ್ಮಲ್ಕರ್ ಕುಮಟಾ ಬಿಜೆಪಿ ಅಧ್ಯಕ್ಷ ಹೇಮಂತ ಗಾಂವ್ಕರ್,ಅರುಣ್ ಮಣಕೀಕರ್ ಅನಿಲ್ ರೊಡ್ರಗೀಸ್ ಕಿರಣ ಪ್ರಭು ಅರವಿಂದ ಶಾನಭಾಗ ,ಮೈಕಲ್ ಪರ್ನಾಂಡೀಸ್,ಅರುಣ ಗುಡಿಗಾರ ದಿನೇಶವಾಳ್ಕೆ ಪರಿಷದ್ ನ ಸದಸ್ಯ ವಿನೋದ ಪ್ರಭು ಶೃದ್ದಾ ಭಟ್ ಜಯಾಶಾನಭಾಗ ಶೀತಲ್ ಭಂಡಾರಿ, ಶೋಭಾ ಭಂಡಾರಿ ,ಗೌರೀಶ, ಮಹೇಶನಾಯ್ಕ ಮೊದಲಾದವರು ಉಪಸ್ಥಿತರಿದ್ದರು.