ವೀಡಿಯೋ

ಶಿರಸಿ: ಐಷಾರಾಮಿ ಕಾರಿನಲ್ಲಿ ನಡುರಾತ್ರಿ ಬಂದಿದ್ದ ಕೆಲವರು ರಸ್ತೆ ಬದಿಯಲ್ಲಿ ಮಲಗಿಕೊಂಡಿದ್ದ ದನಗಳನ್ನು ಅಕ್ರಮವಾಗಿ ವಾಹನಕ್ಕೆ ತುಂಬಿಕೊಂಡು ಹೋಗಿರುವ ವಿಡಿಯೊವೊಂದು ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.

RELATED ARTICLES  ಬೆಲೆ ಏರಿಕೆ ಹಾಗೂ ಇತರ ಸಮಸ್ಯೆ ಬಗ್ಗೆ ಖಂಡನೆ : ಜಿಲ್ಲಾ ಯೂಥ್ ಕಾಂಗ್ರೆಸ್ ನ ಪದಾಧಿಕಾರಿಗಳಿಂದ ಪ್ರತಿಭಟನೆ.

ನಡುರಾತ್ರಿ ಸುಮಾರು 2.30ರ ವೇಳೆಗೆ ಕಾರಿನಲ್ಲಿ ಬಂದಿದ್ದ ಮೂವರು ಅಂಗಡಿಯ ಎದುರಿನಲ್ಲಿ ಮಲಗಿದ್ದ ಹಸುವೊಂದನ್ನು ಎಳೆದಾಡಿ ವಾಹನಕ್ಕೆ ತುಂಬುತ್ತಿದ್ದ ದೃಶ್ಯ ಈ ವಿಡಿಯೊದಲ್ಲಿದೆ. ಮೂರ್ನಾಲ್ಕು ದಿನಗಳ ಹಿಂದೆ ನಗರದ ಬಡಾವಣೆಯೊಂದರಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ ಎನ್ನಲಾಗಿದೆ. ಬಕ್ರೀದ್ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವುದು ನಗರದಲ್ಲಿ ಚರ್ಚೆಯ ಸಂಗತಿಯಾಗಿ ಮಾರ್ಪಟ್ಟಿದೆ. ಆದರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

RELATED ARTICLES  ಧಾರವಾಡದಲ್ಲಿ ಸ್ವರ್ಣ ಪದಕ ಪಡೆದ ಹೊನ್ನಾವರದಲ್ಲಿ ವ್ಯಾಸಂಗ ಮಾಡಿದ ಮೇಘಾ ಭಟ್