ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 61 ಕರೋನಾ ಪಾಸಿಟಿವ್ ವರದಿಯಾಗಿದೆ.
ಕಾರವಾರದಲ್ಲಿ 4, ಅಂಕೋಲಾ 3, ಕುಮಟಾದಲ್ಲಿ 9, ಹೊನ್ನಾವರ 4, ಭಟ್ಕಳದಲ್ಲಿ 15, ಶಿರಸಿಯಲ್ಲಿ 4, ಸಿದ್ದಾಪುರದಲ್ಲಿ 3, ಯಲ್ಲಾಪುರ 4, ಮುಂಡಗೋಡದಲ್ಲಿ 2, ಹಳಿಯಾಳದಲ್ಲಿ 6, ಜೊಯಿಡಾದಲ್ಲಿ 7 ಮಂದಿಯಲ್ಲ ಸೋಂಕು ದೃಢಪಟ್ಟಿದೆ.
70 ಜನ ಇಂದು ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ. ಕಾರವಾರದಲ್ಲಿ 15, ಭಟ್ಕಳ 12, ಶಿರಸಿ 5, ಸಿದ್ದಾಪುರ ಓರ್ವ, ಯಲ್ಲಾಪುರ 17, ಮುಂಡಗೋಡ 3, ಹಳಿಯಾಳದಲ್ಲಿ 13, ಜೊಯಿಡಾದಲ್ಲಿ ಐವರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈ ಮೂಲಕ 2977 ಜನ ಗುಣಮುಖರಾದವರ ಸಂಖ್ಯೆಯಾಗಿದ್ದು, 567 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 254 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಹಳಿಯಾಳದಲ್ಲಿ ಒಂದು ಸಾವು ಸಂಭವಿಸುವ ಮೂಲಕ ಸತ್ತವರ ಸಂಖ್ಯೆ 39 ಕ್ಕೆ ಏರಿದೆ.