ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 111 ಕರೋನಾ ಪಾಸಿಟಿವ್ ಕೇಸ್ ವರದಿಯಾಗಿದೆ.
ಕಾರವಾರದಲ್ಲಿ 3, ಅಂಕೋಲಾ 3, ಕುಮಟಾದಲ್ಲಿ 3, ಹೊನ್ನಾವರ 30, ಭಟ್ಕಳದಲ್ಲಿ 16, ಶಿರಸಿಯಲ್ಲಿ 2, ಸಿದ್ದಾಪುರದಲ್ಲಿ 25, ಯಲ್ಲಾಪುರ 0, ಮುಂಡಗೋಡದಲ್ಲಿ 11, ಹಳಿಯಾಳದಲ್ಲಿ 18 ಮಂದಿಯಲ್ಲ ಸೋಂಕು ದೃಢಪಟ್ಟಿದೆ.
63 ಜನ ಇಂದು ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ. ಕಾರವಾರದಲ್ಲಿ 9 ಹೊನ್ನಾವರ 4, ಮುಂಡಗೋಡ 30, ಹಳಿಯಾಳದಲ್ಲಿ 18, ಜೊಯಿಡಾದಲ್ಲಿ 2 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈ ಮೂಲಕ 3040 ಜನ ಗುಣಮುಖರಾದವರ ಸಂಖ್ಯೆಯಾಗಿದ್ದು,
578 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 290 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಮುಂಡಗೋಡಿನಲ್ಲಿ ಒಂದು ಸಾವು ಸಂಭವಿಸುವ ಮೂಲಕ ಸತ್ತವರ ಸಂಖ್ಯೆ 40 ಕ್ಕೆ ಏರಿದೆ.