ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಟಿತ ಡಾ|| ಏ.ವಿ.ಬಾಳಿಗಾ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗವು ಅಗಸ್ಟ್ 24 ರಂದು ಆನ್ ಲೈನ್ ರಾಷ್ಟ್ರೀಯ ವಿಬಿನಾರ್ ಅನು ಆಯೋಜಿಸಿತ್ತು. “ Applications of Thin Film Technology” ಈ ವಿಷಯದ ಮೇಲೆ ಹಮ್ಮಿಕೊಂಡ ವಿಚಾರ ಸಂಕಿರಣಕ್ಕೆ 100 ಜನ ಆಸಕ್ತರು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಜೂಮ್ ಅಂತರ್ಜಾಲ ಮತ್ತು ಯೂ ಟ್ಯೂಬ್ ಮೂಲಕ ಪ್ರಸಾರಗೊಂಡಿತು.ಕಾಲೇಜಿನ ಪ್ರಾಂಶುಪಾಲರಾದ ಡಾ||. ಎಸ್. ಎನ್. ಶೆಟ್ಟಿಯವರು ಅಥಿತಿ ಉಪನ್ಯಾಸಕರಾದ ಡಾ||.ಮಂಜುನಾಥ್ ಪಟ್ಟಾಭಿ ಅವರನ್ನು ಸ್ವಾಗತಿಸಿ ಅವರು ಇಂದಿನ ಭೌತಶಾತ್ರ ವೇಬಿನರ್ ಗೆ ಸಂಪನ್ಮೂಲ ವ್ಯಕ್ತಿಗಲಾಗಿರುವುದು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. ಇವರು ಮಂಗಳುರ್ ವಿಶ್ವವಿದ್ಯಾಲಯದ ವಸ್ತುವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಹಲವು ವರ್ಷಗಳ ಸಂಶೋಧನಾ ಅನುಭವವುಳ್ಳವರು ಎಂದು ಶ್ಲಾಘಿಸಿದರು.
ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ||.ಎನ್.ಡಿ. ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಅತಿಥಿಗಳನ್ನು ಪರಿಚಯಿಸಿದರು. ಒಂದುಗಂಟೆಗೂ ಹೆಚ್ಚುಕಾಲ ಮೂಡಿಬಂದ ಈ ವೇಬಿನರ್ ಕಾರ್ಯಕ್ರಮವನ್ನು ವಿದ್ಯಾರ್ಥಿ ಗಳಿಗಾಗಿಯೇ ಪ್ರಸ್ತುತ ಪಡಿಸಿದ ಪಟ್ಟಾಭಿ ಯವರು ಥಿಂಫಿಲಂ (ಖಿhiಟಿಜಿiಟm) ಗಳ ಮಹತ್ವ ಹಾಗೂ ನ್ಯಾನೊ ವಿಜ್ಞಾದಲ್ಲಿ ಇವುಗಳ ಅಳವಡಿಕೆ ಬಗ್ಗೆ ಚೆನ್ನಾಗಿ ವಿವರಿಸಿದರು. ಪ್ರೊ|| ವಿನಾಯಕ ಭಟ್ ವಂದನಾರ್ಪಣೆ ಯನ್ನು ನೆರವೇರಿಸುತ್ತ ಸಂಪನ್ಮೂಲ ವ್ಯಕ್ತಿಗಳಿಗೆ, ಕೆನರಾ ಕಾಲೇಜು ಸೊಸೈಟಿ ಯ ಅಧ್ಯಕ್ಷ ರು, ಶ್ರೀ ರಘು ಪಿಕಳೆ, ಚೇರ್ ಮನ್ ಶ್ರೀ ಎಮ್. ವಾಯ್ ಪ್ರಭು , ಕಾರ್ಯದರ್ಶಿಗಳು ಶ್ರೀ ವಿನೋದ ಪ್ರಭು ಮತ್ತು ಸಮಸ್ತ ಆಡಳಿತ ಮಂಡಳಿಯವರು, ಪ್ರಾಧ್ಯಾಪಕವ್ರಂದ, ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜನೆಯಲ್ಲಿ ಗೂಗಲ್ ಫಾರ್ಮ್ ಮತ್ತು ಈ ಪ್ರಮಾಣಪತ್ರ ತಯಾರಿಕೆಗೆ ಸಂಪೂರ್ಣ ಸಹಕಾರ ನೀಡಿದ ಬ್.ಎಸ್ಸಿ.ವಿದ್ಯಾರ್ಥಿ ಗಳಾದ ಶ್ರೀ. ವಿವೇಕ್ ಹೆಗ್ಡೆ ಮತ್ತು ಶ್ರೀ ವಿವೇಕ್ ಶೆಟ್ಟಿ ಇವರನ್ನು ಅಭಿನಂದಿಸಿದರು.