ಭಟ್ಕಳ : ದಿನಾಂಕ: 14-08-2020 ರಂದು ಭಟ್ಕಳ ತಾಲ್ಲೂಕು ಬೆಣಂದೂರು ಗ್ರಾಮದ ಬೇಟೆ ಬೀರ ದೇವಸ್ಥಾನದ ಬಳಿ ನಡೆದ ಪದ್ಮಯ್ಯ ಜಟ್ಟ ನಾಯ್ಕ ಕೊಲೆ ಪ್ರಕರಣದಲ್ಲಿ, ಕೊಲೆ ಮಾಡಿ ದಸ್ತಗಿರಿಗೆ ಸಿಗದೇ ತಲೆ ಮರೆಸಿಕೊಂಡ ಆರೋಪಿತರ ಪತ್ತೆಯ ಕುರಿತು ಶ್ರೀ ನಿಖೀಲ್ ಬಿ. ಐ.ಪಿ.ಎಸ್., ಸಹಾಯಕ ಪೊಲೀಸ್ ಅಧೀಕ್ಷಕರು ಉಪ ವಿಭಾಗ ಭಟ್ಕಳ ರವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿರವರ 3 ತಂಡಗಳನ್ನು ರಚಿಸಿ ಒಂದು ತಂಡವನ್ನು ಮಹಾರಾಷ್ಟದ ಕೊಲ್ಲಾಪುರಕ್ಕೆ, ಇನ್ನೊಂದು ತಂಡವನ್ನು ಬೆಳಗಾವಿಯ ಗೋಕಾಕ ತಾಲೂಕಿನ ಮೂಡಲಗಿಗೆ ಹಾಗೂ 03 ನೇ ತಂಡವನ್ನು ಭಟ್ಕಳದಲ್ಲಿ ನಿಯೋಜಿಸಿ ಇಂದು ದಿನಾಂಕ: 24-08-2020 ರಂದು ಈ ಕೆಳಕಂಡ ಎಂಟು ತಲೆ ಮರೆಸಿಕೊಂಡ ಆರೋಪಿಗಳನ್ನು ಪತ್ತೆ ಮಾಡಿ ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು, ಬಡಿಗೆ, ಕಬ್ಬಿಣದ ರಾಡ್‍ಗಳನ್ನು ಜಪ್ತ ಪಡಿಸಿಕೊಂಳ್ಳಲಾಗಿದೆ.
1. ಜಯಂತ ತಂದೆ ಬಲೀಂದ್ರ ನಾಯ್ಕ ಪ್ರಾಯ :31 ವರ್ಷ ಉದ್ಯೋಗ : ಟ್ಯಾಕ್ಸಿ ಚಾಲಕ ವಾಸ : ಬೆಣಂದೂರು, ಭಟ್ಕಳ
2. ಮಂಜುನಾಥ ಬಲೀಂದ್ರ ನಾಯ್ಕ ಪ್ರಾಯ : 37 ವರ್ಷಉದ್ಯೋಗ : ಪಿಗ್ಮಿ ಎಜೆಂಟ್ ವಾಸ : ಬೆಣಂದೂರು, ಭಟ್ಕಳ
3. ದೆವೇಂದ್ರ ತಂದೆ ಬಲೀಂದ್ರ ನಾಯ್ಕ ಪ್ರಾಯ : 27 ವರ್ಷ ಉದ್ಯೋಗ : ಕೇರಳಾದಲ್ಲಿ ಕೆಲಸ ವಾಸ : ಬೆಣಂದೂರು, ಭಟ್ಕಳ
4. ಸುಬ್ರಮಣ್ಯ ತಂದೆ ಬಲೀಂದ್ರ ನಾಯ್ಕ ಪ್ರಾಯ : 24 ವರ್ಷಉದ್ಯೋಗ : ಹೈನುಗಾರಿಕೆ ವಾಸ : ಬೆಣಂದೂರು, ಭಟ್ಕಳ
5. ಬಲೀಂದ್ರ ತಂದೆ ಹೊನ್ನಪ್ಪ ನಾಯ್ಕ ಪ್ರಾಯ : 63 ವರ್ಷ ಉದ್ಯೋಗ : ಮನೆಕೆಲಸ ವಾಸ : ಬೆಣಂದೂರು, ಭಟ್ಕಳ
6. ಮಹೇಶ ತಂದೆ ಜಟ್ಟಪ್ಪ ನಾಯ್ಕ ಪ್ರಾಯ : 28 ವರ್ಷ ಉದ್ಯೋಗ : ಹೊಟೇಲ ಕೆಲಸ ವಾಸ : ಬೆಣಂದೂರು, ಭಟ್ಕಳ
7. ಸುರೇಶ ತಂದೆ ಮಾದೇವ ನಾಯ್ಕ ಪ್ರಾಯ : 27 ವರ್ಷ ಉದ್ಯೋಗ : ಕೊಲ್ಲಾಪುರದ ಸ್ವಾಗತ್ ರೆಸ್ಟೊರೆಂಟದಲ್ಲಿ ಕೆಲಸ ವಾಸ : ಬೆಣಂದೂರು, ಭಟ್ಕಳ
8. ಸುನೀಲ್ ಮಾದೇವ ನಾಯ್ಕ ಪ್ರಾಯ : 23 ವರ್ಷ ಉದ್ಯೋಗ : ಬಾರದಲ್ಲಿ ಕೆಲಸ ವಾಸ : ಬೆಣಂದೂರು, ಭಟ್ಕಳ
ಈ ಕಾರ್ಯಾಚರಣೆಯ ತಂಡದಲ್ಲಿ ಭಟ್ಕಳ ವೃತ್ತ ನಿರೀಕ್ಷಕರಾದ ಶ್ರೀ ದಿವಾಕರ ಪಿ.ಎಮ್, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಓಂಕಾರಪ್ಪ, ಭಟ್ಕಳ ಶಹರ ಠಾಣೆಯ ಪಿ.ಎಸ್.ಐ ಶ್ರೀ ಭರತಕುಮಾರ ವಿ, ಹೆಚ್.ಬಿ ಕುಡಗುಂಟಿ, ಹೊನ್ನಾವರ ಠಾಣೆಯ ಪಿ.ಎಸ್.ಐ ಶ್ರೀ ಅಶೋಕಕುಮಾರ, ಕುಮಟಾ ಪೊಲೀಸ ಠಾಣೆಯ ಪಿ.ಎಸ್.ಐ ಶ್ರೀ ರವಿ ಗುಡ್ಡಿ, ಮುರ್ಡೆಶ್ವರ ಪೊಲೀಸ ಠಾಣೆಯ ಪಿ.ಎಸ್.ಐ ಶ್ರೀ ರವೀಂದ್ರ ಬಿರಾದಾರ, ಭಟ್ಕಳ ಗ್ರಾಮೀಣ ಠಾಣೆಯ ಎ.ಎಸ್.ಐ ಶ್ರೀ ಮಂಜುನಾಥ ಗೌಡರ್, ನವೀನ್ ಬೋರ್ಕರ್, ಗೋಪಾಲ ನಾಯಕ ಹಾಗೂ ಸಿಬ್ಬಂದಿಯವರಾದ ಸಿ.ಹೆಚ್.ಸಿ 860 ದೀಪಕ .ಎಸ್. ನಾಯ್ಕ, ಸಿ.ಹೆಚ್.ಸಿ 693 ಮಹೇಶ ಪಟಗಾರ, ಸಿ.ಹೆಚ್.ಸಿ-1347 ವಿನಾಯಕ ಪಾಟೀಲ್, ಸಿ,ಹೆಚ್.ಸಿ-656 ನಾಗರಾಜ ಮೊಗೇರ, ಸಿ.ಎಚ್.ಸಿ -1484 ಗಣೇಶ ಗಾಂವಕರ, ಸಿ.ಎಚ್.ಸಿ-1498 ಅಶೋಕ ನಾಯ್ಕ, ಸಿ.ಎಚ್.ಸಿ 713 ದೇವು. ಆರ್. ನಾಯ್ಕ, ವಿಶೇಷ ತಂಡದ ಸಿಬ್ಬಂದಿಯವರಾದ ಸಿ.ಎಚ್.ಸಿ 66 ಸಂತೋಷ ಹೊನ್ನಾಳ, ಸಿ.ಎಚ್.ಸಿ 04 ಮೋಹನ ಪೂಜಾರಿ, ಸಿ.ಪಿ.ಸಿ 1097 ರಾಜು ಗೌಡ, ಸಿ.ಪಿ.ಸಿ 903 ಮಲ್ಲಿಕಾರ್ಜುನ ಉಟಗಿ, ಸಿ.ಪಿ.ಸಿ 1296 ನಿಂಗನಗೌಡ ಪಾಟೀಲ್, ಸಿ.ಪಿ.ಸಿ 546 ಮಲ್ಲಿಕಾರ್ಜುನ ನಾಯ್ಕ, ಸಿ.ಪಿ.ಸಿ 823 ಸಚೀನ ಪವಾರ, ಸಿ.ಪಿ.ಸಿ 429 ರವಿ ಪಟಗಾರ, ಸಿ.ಪಿ.ಸಿ-764 ಈರಣ್ಣಾ ಪೂಜಾರಿ, ಸಿ.ಪಿ.ಸಿ-769 ಲೋಕೇಶ ಕತ್ತಿ, ಸಿ.ಪಿ.ಸಿ 780 ಗೌತಮ ರೊಡ್ಡಣ್ಣನವರ.ಸಿ.ಪಿ.ಸಿ 842 ಸದಾಶಿವ ಕಟ್ಟಿಮೆನಿ ಹಾಗೂ ಸಿ.ಡಿ.ಆರ್ ವಿಭಾಗದ ಸಿಬ್ಬಂದಿಯವರಾದ ಶ್ರೀ ಸುಧೀರ ಮಡಿವಾಳ, ಶ್ರೀ ರಮೇಶ ನಾಯ್ಕ, ಶ್ರೀ ಅಣ್ಣಪ್ಪ ಬುಡಗೇರಿ ಚಾಲಕರಾದ ಎ.ಹೆಚ್.ಸಿ-421 ದೇವರಾಜ ಮೊಗೇರ, ಸಿ.ಪಿ.ಸಿ -754 ಕುಬೇರ ಹೊಸುರ ಇವರು ಪಾಲ್ಗೊಂಡಿರುತ್ತಾರೆ.