ಕುಮಟಾ : ಇತ್ತೀಚೆಗೆ ಸದಾ ತನ್ನ ಒಂದಿಲ್ಲೊಂದು ವಿಶೇಷ ಬರವಣಿಗೆ ಅಥವಾ ವಿಭಿನ್ನವಾದ ಕಿರುಚಿತ್ರ ನಿರ್ದೇಶಿಸುತ್ತ ಹೊಸ ಭರವಸೆಯನ್ನು ಮೂಡಿಸಿರುವ ‘ವಿನಾಯಕ ಬ್ರಹ್ಮೂರು’ ಅವರು ತನ್ನ ಜನುಮ ದಿನವನ್ನೂ ಅರ್ಥಪೂರ್ಣವನ್ನಾಗಿಯೇ ಇಂದು ಆಚರಿಸಿಕೊಂಡರು.

ಹುಟ್ಟುಹಬ್ಬದ ದಿನದ ನಿಮಿತ್ತ ಕುಮಟಾದಲ್ಲಿನ ಲಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿ ಸಿಹಿ ವಿತರಿಸಿ ತನ್ನ ನೇತ್ರಗಳನ್ನು ಮರಣಾನಂತರ ದಾನವಾಗಿ ನೀಡುವ ಪತ್ರಕ್ಕೆ ಸಹಿ ಮಾಡುವ ಮೂಲಕ “ನೇತ್ರದಾನಿ” ಯಾಗಿ ಸಮಾಜಕ್ಕೊಂದು ಯೋಗ್ಯ ಸಂದೇಶ ನೀಡಿ ತಾನೂ ಧನ್ಯತೆಯನ್ನು ಪಡೆದರು.

RELATED ARTICLES  ಅರಣ್ಯ ಅತಿಕ್ರಮಣದಾರರಿಗೆ ಅವಕಾಶ ಇಲ್ಲ ; ಶಾಸಕ ಕಾಗೇರಿ

ಕುಮಟಾ ಮಿರ್ಜಾನ ಸಮೀಪದ ಬ್ರಹ್ಮೂರಿನವರಾದ ಇವರು ಪತ್ರಕರ್ತರೂ,ಹಲವಾರು ಕಿರುಚಿತ್ರಗಳ ನಿರ್ದೇಶಕರೂ,ಜಿಲ್ಲಾ ಶಾರ್ಟ್ ಮೂವಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದು ಹುಟ್ಟು ಹಬ್ಬದ ದಿನದಂದು ನೇತ್ರದಾನಗೈದು ಜನತೆಗೆ ನೇತ್ರದಾನದ ಜಾಗೃತಿ ಸಂದೇಶ ನೀಡಿದಂತಾಗಿ ಅನುಕರಣೀಯರಾಗಿದ್ದಾರೆ ಎಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ರವರು ‘ವಿನಾಯಕ ಬ್ರಹ್ಮೂರ’ ಅವರಿಗೆ ಪ್ರಮಾಣ ಪತ್ರ ,ಹೂ ಗುಚ್ಛ ನೀಡಿ ಗೌರವಿಸಿ ಅಭಿನಂದಿಸಿದರು.

RELATED ARTICLES  ಬೆಳಕು ಸಂಸ್ಥೆಯ ಸಹಯೋಗದಲ್ಲಿ ಮುಂದುವರೆದ ಗ್ಯಾಸ್ ವಿತರಣಾ ಕಾರ್ಯಕ್ರಮ

ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಸಹಿತ ಎಲ್ಲ ಸಿಬ್ಬಂದಿಗಳು ಹಾಗೂ ಉಪಸ್ಥಿತರಿದ್ದ ಗಣ್ಯರು ವಿನಾಯಕ ಬ್ರಹ್ಮೂರ ರವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೀತ್ಯಾದರಗಳಿಂದ ಶುಭ ಹಾರೈಸಿದರು.